ಮನೋರಂಜನೆ

ರಾಷ್ಟ್ರಗೀತೆಗೆ ಗೌರವ ಕೊಡದ ಮಲಯಾಳಂ ಚಿತ್ರ ನಿರ್ದೇಶಕ ಕಮಲ್ ದೇಶ ಬಿಟ್ಟು ತೊಲಗಲಿ: ಬಿಜೆಪಿ

Pinterest LinkedIn Tumblr


ಕೋಝಿಕ್ಕೋಡ್: ದೇಶದಲ್ಲಿರುವ ನಿಯಮಗಳನ್ನು ಪಾಲಿಸಲು ಸಿದ್ಧವಿಲ್ಲದೇ ಇದ್ದರೆ ಸಿನಿಮಾ ನಿರ್ದೇಶಕ ಕಮಲ್ ದೇಶ ಬಿಟ್ಟು ತೊಲಗಲಿ ಎಂದು ಕೇರಳದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎ.ಎನ್. ರಾಧಾಕೃಷ್ಣನ್ ಹೇಳಿದ್ದಾರೆ.

ಮಲಯಾಳಂ ಸಿನಿಮಾರಂಗದ ಖ್ಯಾತ ನಿರ್ದೇಶಕ ಕಮಲ್, ಎಸ್‍ಡಿಪಿಐಯಂಥಾ ಉಗ್ರ ಸಂಘಟನೆಗಳಲ್ಲಿ ತೊಡಗಿರುವ ವ್ಯಕ್ತಿಯಾಗಿದ್ದಾರೆ. ನರೇಂದ್ರ ಮೋದಿಯವರನ್ನು ನರಭಕ್ಷಕ ಎಂದು ಕಮಲ್ ಕರೆದಿದ್ದರು. ಸಿನಿಮಾ ಥಿಯೇಟರ್‍ ಗಳಲ್ಲಿ ರಾಷ್ಟ್ರಗೀತೆ ನುಡಿಸಬೇಕು ಎಂಬ ನಿಯಮವನ್ನು ಕಮಲ್ ಪಾಲಿಸಿಲ್ಲ. ಕಮಲ್ ಅವರ ಈ ನಡೆ ಸರಿಯಲ್ಲ ಎಂದು ಬಿಜೆಪಿ ಹೇಳಿದೆ.

ಯುವಜನಾಂಗವನ್ನು ತಪ್ಪು ದಾರಿಗೆ ಕರೆದೊಯ್ಯುವ ಚೆಗುವೆರಾ ಅವರ ಚಿತ್ರಗಳನ್ನು ಕೇರಳದ ಗ್ರಾಮಗಳಿಂದ ತೆಗೆದುಹಾಕಬೇಕು. ಗಾಂಧೀಜಿ, ವಿವೇಕಾನಂದ, ಮದರ್ ತೆರೆಸಾ ಮೊದಲಾದವರೊಂದಿಗೆ ಚೆಗುವೆರಾ ಅವರ ಚಿತ್ರಗಳನ್ನಿರಿಸುವುದು ಸರಿಯಲ್ಲ. ಕಪ್ಪು ವರ್ಗದ ಜನರನ್ನು ಹತ್ಯೆ ಮಾಡಿದವರು ಚೆ. ಮುಸೋಲಿನಿ, ಹಿಟ್ಲರ್ , ಸ್ಟಾಲಿನ್ ಮೊದಲಾದವರ ಚಿತ್ರದೊಂದಿಗೆ ಚೆ ಅವರ ಚಿತ್ರವನ್ನಿರಿಸಬೇಕು ಎಂದು ರಾಧಾಕೃಷ್ಣನ್ ಹೇಳಿದ್ದಾರೆ.
ಆದರೆ ಇಂಥಾ ವಿಷಯಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಮಲ್ ಹೇಳಿದ್ದಾರೆ.

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸುವುದಕ್ಕೆ ಕಮಲ್ ವಿರೋಧ ವ್ಯಕ್ತ ಪಡಿಸಿದ್ದರು. ಅಷ್ಟೇ ಅಲ್ಲ ಇತ್ತೀಚೆಗೆ ಮುಕ್ತಾಯಗೊಂಡ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ರಾಷ್ಟ್ರಗೀತೆ ನುಡಿಸುವಾಗ ಎದ್ದು ನಿಲ್ಲದೇ ಇರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕಾಗಿ ಚಿತ್ರಮಂದಿರದೊಳಗೆ ಪ್ರವೇಶಿಸಲು ತಯಾರಾಗಿದ್ದ ಪೊಲೀಸರಿಗೆ ಕಮಲ್ ತಡೆಯೊಡ್ಡಿದ್ದರು.

ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ನುಡಿಸದೇ ಇರುವುದರ ಬಗ್ಗೆ ಬಿಜೆಪಿ ಸುಪ್ರೀಂಕೋರ್ಟ್‍ಗೆ ದೂರು ಕೂಡಾ ನೀಡಿತ್ತು.

Comments are closed.