ಕರ್ನಾಟಕ

ನನಗೆ ಬಂದ ರಾಜಕೀಯ, ಸಿನಿಮಾರಂಗದ ಅವಕಾಶಗಳನ್ನು ರಾಮದಾಸ್ ತಪ್ಪಿಸಿದ್ದಾರೆ: ಪ್ರೇಮಕುಮಾರಿ

Pinterest LinkedIn Tumblr


ಮೈಸೂರು: ನನಗೆ ಬಂದ ರಾಜಕೀಯ ಹಾಗೂ ಸಿನಿಮಾರಂಗದ ಅವಕಾಶಗಳನ್ನು ಮಾಜಿ ಸಚಿವ ರಾಮದಾಸ್ ಪಿತೂರಿ ಮಾಡಿ ತಪ್ಪಿಸಿದ್ದಾರೆ. ಸಾಮಾಜಿಕ ಹೋರಾಟಕ್ಕಾಗಿ ನಾನು ರಾಜಕೀಯ ಪ್ರವೇಶಿಸುವೆ ಎಂದು ಪ್ರೇಮಕುಮಾರಿ ಬಾಂಬ್ ಸಿಡಿಸಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ರಾಮದಾಸ್ ತಮ್ಮ ಹಣ ಹಾಗೂ ಅಧಿಕಾರ ದುರುಪಯೋಗ ಪಡಿಸಿಕೊಂಡು ಕಿರುಕುಳ ನೀಡಿದ್ದಾರೆ. ನಾನು ಸಾಮಾಜಿಕ ಹೋರಾಟ ಮಾಡಲಿದ್ದೇನೆ. ಇದಕ್ಕಾಗಿ ರಾಜಕೀಯ ಪ್ರವೇಶ ಅನಿವಾರ್ಯವಾಗಿದೆ ಎಂದರು.

ಸರಕಾರದಿಂದ ತನಿಖಾ ವರಿದಿ ಹಾಗೂ ದಾಖಲೆಗಳು ಸೋರಿಕೆಯಾಗಿವೆ. ತಮ್ಮ ಪ್ರಭಾವಿ ಬೀರಿ ನನಗೆ ರಾಜಕೀಯ ಹಾಗೂ ಸಿನಿಮಾರಂಗದಿಂದ ಬಂದ ಅವಕಾಶಗಳನ್ನು ತಪ್ಪಿಸಿದ್ದಾರೆ. ನಾನು ದಾಖಲಿಸಿದ್ದ ಎಲ್ಲ ಪ್ರಕರಣಗಳನ್ನು ಒತ್ತಾಯ ಪೂರ್ವಕವಾಗಿ ಮುಚ್ಚಿಹಾಕಿದ್ದಾರೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಅನೇಕ ನಾಯಕರನ್ನು ಕೇಳಿಕೊಂಡರೆ ಅವರೂ ಸಹ ಸ್ಪಂದಿಸಿಲ್ಲ ಎಂದು ದೂರಿದರು.

ಕೆಲವು ವರ್ಷಗಳ ಹಿಂದೆ ಮಾಜಿ ಸಚಿವ ರಾಮದಾಸ್ ಹಾಗೂ ಪ್ರೇಮಕುಮಾರಿ ನಡುವಿನ ಪ್ರೇಮ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.

Comments are closed.