ಮನೋರಂಜನೆ

ಬಾಲಿವುಡ್‌ನ ದುಬಾರಿ ವಿಚ್ಛೇದನಗಳು

Pinterest LinkedIn Tumblr


ಈ ಬಾಲಿವುಡ್ ಮಂದಿಯೇ ಹಾಗೆ! ಸುದ್ದಿ ಮನೆಯಲ್ಲಿ ಸದಾ ಸುದ್ದಿಯಾಗುತ್ತಲೇ ಇರುತ್ತಾರೆ. ಅವರು ಮಾಡಿದ್ದೆಲ್ಲವೂ ಸುದ್ದಿಯೇ ಬಿಡಿ! ಇಂತಿಪ್ಪ ಬಾಲಿವುಡ್ ನಟರ ಮದುವೆ ಮತ್ತು ವಿಚ್ಛೇದನಗಳು ದೊಡ್ಡ ಸುದ್ದಿಯ ಸಾಲಿನಲ್ಲಿ ನಿಲ್ಲುತ್ತವೆ. ಕೆಲವು ನಟ-ನಟಿಯ ದುಬಾರಿ ವಿಚ್ಛೇದನಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಕರಿಷ್ಮಾ ಕಪೂರ್‌ ಮತ್ತು ಸಂಜಯ್‌ ಕಪೂರ್‌
2003ರಲ್ಲಿ ಸಂಜಯ್ ಕಪೂರ್‌ ಅವರನ್ನು ಮದುವೆಯಾಗಿದ್ದ ಬಾಲಿವುಡ್ ಚೆಲುವೆ ಕರಿಷ್ಮಾ ಕಪೂರ್ ನ್ಯಾಯಾಂಗ ಹೋರಾಟದ ಬಳಿಕ 2016ರಲ್ಲಿ ವಿಚ್ಛೇದನ ಪಡೆದರು.

ಮೂಲಗಳ ಪ್ರಕಾರ ಕರಿಷ್ಮಾ ₹ 7 ಕೋಟಿ ಜೀವನಾಂಶ ಪರಿಹಾರ ಮೊತ್ತವನ್ನು ಸಂಜಯ್ ಕಪೂರ್‌ ಅವರಿಂದ ಪಡೆದಿದ್ದಾರೆ. ಇದರ ಜೊತೆಗೆ ಇಬ್ಬರು ಮಕ್ಕಳ ಶಿಕ್ಷಣ ಮತ್ತು ಯೋಗಕ್ಷೇಮಕ್ಕೆ ₹ 14 ಕೋಟಿ ಪಡೆದಿದ್ದಾರೆ. ಒಟ್ಟಾರೆ ಕರಿಷ್ಮಾ ₹ 21 ಕೋಟಿ ವಿಚ್ಛೇದನ ಪರಿಹಾರ ಮೊತ್ತ ಪಡೆದಂತಾಗಿದೆ.

ಉದ್ಯಮಿ ಸಂಜಯ್‌ ಕಪೂರ್‌ ಜೊತೆಯಲ್ಲಿ 11 ವರ್ಷ ಸುಖ ಸಂಸಾರ ನಡೆಸಿದ್ದ ಕರಿಷ್ಮಾ 2014ರಲ್ಲಿ ವಿಚ್ಛೇದನ ಕೋರಿ ಕೋರ್ಟ್ ಮೊರೆ ಹೊಗಿದ್ದರು. ವಿಚ್ಛೇದನ ಬಳಿಕ ಕರಿಷ್ಮಾ ಕಪೂರ್ ತಂದೆ ತಾಯಿ ಜತೆಯಲ್ಲಿ ವಾಸವಿದ್ದಾರೆ.

ಪ್ರಭುದೇವ ಮತ್ತು ರಾಮಲತಾ
ಬಾಲಿವುಡ್ ಸೇರಿದಂತೆ ತೆಲುಗು, ತಮಿಳಿನ ಜನಪ್ರಿಯ ನಟ, ನಿರ್ದೇಶಕ , ನೃತ್ಯ ನಿರ್ದೇಶಕ ಪ್ರಭುದೇವ್‌ ₹ 25 ಕೋಟಿ ಮೊತ್ತದ ಆಸ್ತಿ ನೀಡಿ ವಿಚ್ಛೇದನ ಪಡೆದಿದ್ದಾರೆ.

2011ರ ಜುಲೈನಲ್ಲಿ ಪ್ರಭುದೇವ ಮತ್ತು ಪತ್ನಿ ರಾಮಲತಾ ಅವರ ವಿಚ್ಛೇದನಕ್ಕೆ ನ್ಯಾಯಾಲಯ ಅನುಮತಿ ನೀಡಿತು. ರಾಮಲತಾ ಅವರು ಪರಿಹಾರ ಮೊತ್ತವಾಗಿ ₹ 25 ಕೋಟಿ ಮೊತ್ತದ ಆಸ್ತಿ ಮತ್ತು ಎರಡು ಕಾರುಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.

ಪ್ರಭುದೇವ ಅವರು ತಮಿಳು ನಟಿ ನಯನತಾರಾ ಅವರನ್ನು ಮದುವೆ ಆಗಲಿದ್ದಾರೆ ಎಂಬ ಗಾಸಿಪ್‌ಗಳು ಹರಿದಾಡಿದ್ದವು. ಸದ್ಯ ಪ್ರಭುದೇವ ಮರು ಮದುವೆಯಾಗದೆ ಒಂಟಿಯಾಗಿದ್ದಾರೆ.

ಸೈಫ್‌ ಅಲಿಖಾನ್‌ ಮತ್ತು ಅಮೃತಾ ಸಿಂಗ್‌
ಬಾಲಿವುಡ್‌ ಹಾಟ್ ಫೇವರಿಟ್‌ ಜೋಡಿ ಸೈಫ್‌ ಅಲಿಖಾನ್‌ ಪಟೌಡಿ ಮತ್ತು ಅಮೃತಾ ಸಿಂಗ್‌ ಅವರದ್ದು ಸಹ ದುಬಾರಿ ಮೊತ್ತದ ವಿಚ್ಛೇದನ!
2004ರಲ್ಲಿ ಈ ತಾರಾ ಜೋಡಿ ಬೇರೆಯಾಯಿತು. ಸೈಫ್‌ ಆಲಿಖಾನ್‌ ಅಮೃತಾ ಅವರ ಜೀವನಾಂಶಕ್ಕಾಗಿ ₹ 5 ಕೋಟಿ ಪರಿಹಾರ ಧನ ನೀಡಿದ್ದಾರೆ. ಕೋರ್ಟ್‌ನಲ್ಲಿ ಅಮೃತಾ ಇಟ್ಟಿದ ಎಲ್ಲ ಬೇಡಿಕೆಗಳನ್ನು ಸೈಫ್‌ ಈಡೇರಿಸಿದ್ದಾರೆ.

₹ 5 ಕೋಟಿ ಜತೆಗೆ ಒಂದು ಬಂಗಲೆ, ಮಗನ ವಿದ್ಯಾಭ್ಯಾಸಕ್ಕೆ ಪ್ರತಿ ತಿಂಗಳು ₹ 1 ಲಕ್ಷ ನೀಡುತ್ತಿದ್ದಾರೆ. ನಟಿ ಕರೀನಾ ಕಪೂರ್‌ ಅವರನ್ನು ಮದುವೆಯಾಗಿರುವ ಸೈಫ್‌ಗೆ ಈಗ ತೈಮೂರ್ ಎಂಬ ಮಗ ಹುಟ್ಟಿದ್ದಾನೆ.

ಸಂಜಯ್‌ ದತ್‌ ಮತ್ತು ರಿಯಾ ಪಿಳ್ಳೈ
ಬಾಲಿವುಡ್‌ನ ‘ಖಳನಾಯಕ್’ ಖ್ಯಾತಿಯ ಸಂಜಯ್ ದತ್‌ 2005ರಲ್ಲಿ ಪತ್ನಿ ರಿಯಾ ಪಿಳ್ಳೈ ಅವರಿಂದ ವಿಚ್ಛೇದನ ಪಡೆದರು. ಆಗ ರಿಯಾಗೆ ಅವರು ನೀಡಿದ್ದು ₹ 8 ಕೋಟಿ ಮತ್ತು ಒಂದು ಐಷಾರಾಮಿ ಕಾರು.

ರಿಯಾ ಪಿಳ್ಳೈ ಅವರು ಭಾರತದ ಖ್ಯಾತ ಟೆನಿಸ್ ಪಟು ಲಿಯಾಂಡರ್ ಪೇಸ್ ಅವರ ಜೊತೆ ಅಫೇರ್ ಹೊಂದಿದ್ದರು. ನಂತರದ ದಿನಗಳಲ್ಲಿ ಸಂಜಯ್ ದತ್ ಮಾನ್ಯತಾ ಅವರನ್ನು ಮದುವೆಯಾದರು. ಲಿಯಾಂಡರ್ ಪೇಸ್, ಬಾಲಿವುಡ್ ನಟಿ ಲಾರಾ ದತ್ತ ಅವರನ್ನು ವಿವಾಹವಾದರು.

ಹೃತಿಕ್‌ ರೋಷನ್ ಮತ್ತು ಸೂಸೇನ್‌ ಖಾನ್‌
ಬಾಲಿವುಡ್‌ ಇತಿಹಾದಲ್ಲೇ ದುಬಾರಿ ಡೈವೋರ್ಸ್ ಅಂದ್ರೆ ನೆನಪಾಗುವುದು ಹೃತಿಕ್ ರೋಷನ್‌! ಪತ್ನಿ ಸೂಸೇನ್‌ ಖಾನ್‌ಗೆ ಅವರು ನೀಡಿದ್ದು ಬರೋಬ್ಬರಿ ₹ 380 ಕೋಟಿ .

ಸೂಸೇನ್‌ ಅವರು ₹ 400 ಕೋಟಿ ಬೇಡಿಕೆ ಇಟ್ಟಿದ್ದರು. ಆದರೆ ಹೃತಿಕ್ ₹ 380 ಕೋಟಿ ನೀಡಿ 2014ರಲ್ಲಿ ವಿಚ್ಛೇದನ ಪಡೆದರು.
ಅನೈತಿಕ ಸಂಬಂಧಗಳೇ ಇವರ ವಿಚ್ಛೇದನಕ್ಕೆ ಕಾರಣ ಎಂಬ ಗಾಳಿ ಸುದ್ದಿಗಳು ಹರಿದಾಡಿದ್ದವು. ಹೃತಿಕ್‌ ನಟಿ ಬಾರ್ಬರಾ ಮೋರಿ ಜತೆಯಲ್ಲಿ ಸಂಬಂಧ ಹೊಂದಿದ್ದರೆ, ಸೂಸೇನ್‌ ಖಾನ್‌ ನಟ ಅರ್ಜುನ್‌ ರಾಂಪಾಲ್‌ ಜತೆಯಲ್ಲಿ ಆತ್ಮೀಯ ಒಡನಾಟ ಹೊಂದಿದ್ದರು ಎನ್ನಲಾಗಿದೆ.

Comments are closed.