ಮನೋರಂಜನೆ

ಮರಾಠಿಯ ‘ಸೈರಾಟ್’ ಕನ್ನಡದಲ್ಲಿ ‘ಮನಸು ಮಲ್ಲಿಗೆ’

Pinterest LinkedIn Tumblr

manasu-mallige
ಬೆಂಗಳೂರು: ೨೦೧೫ ರ ಮರಾಠಿ ಬ್ಲಾಕ್ ಬಸ್ಟರ್ ಸಿನೆಮಾ ‘ಸೈರಾಟ್’ನ ಕನ್ನಡ ಅವತರಿಣಿಕೆಯ ಚಿತ್ರೀಕರಣ ಬಹುತೇಕ ಸಂಪೂರ್ಣಗೊಂಡಿದ್ದು, ಶೀರ್ಷಿಕೆ ಕನ್ನಡದಲ್ಲಿ ‘ಮನಸು ಮಲ್ಲಿಗೆ’ಯಾಗಿದೆ. ಸಂಕಲನ ಮತ್ತು ಚಿತ್ರೀಕರಣದ ನಂತರದ ಕೆಲಸಗಳು ಶೀಘ್ರವೇ ಮುಗಿಯಲಿದ್ದು, ಫೆಬ್ರವರಿ ೯ ಕ್ಕೆ ಸಿನೆಮಾ ಬಿಡುಗಡೆಯಾಗಲಿದೆ.
ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಈ ರಿಮೇಕ್ ಚಿತ್ರವನ್ನು ಎಸ್ ನಾರಾಯಣ್ ನಿರ್ದೇಶಿಸಿದ್ದು, ಈ ಸುದ್ದಿಯನ್ನು ಧೃಢೀಕರಿಸುತ್ತಾರೆ. ಮೂಲ ಮರಾಠಿ ಸಿನೆಮಾದಲ್ಲಿ ನಟಿಸಿದ್ದ ರಿಂಕಿ ರಾಜಗುರು ಕನ್ನಡದಲ್ಲಿಯೂ ನಾಯಕ ನಟಿಯಾಗಿ ನಟಿಸಿರುವುದು ವಿಶೇಷ.
ದಕ್ಷಿಣದ ಎಲ್ಲ ಭಾಷೆಗಳ ರಿಮೇಕ್ ಹಕ್ಕುಗಳನ್ನು ರಾಕ್ಲೈನ್ ವೆಂಕಟೇಶ್ ಖರೀದಿಸಿದ್ದಾರೆ, ಧರ್ಮ ಪ್ರೊಡಕ್ಷನ್ಸ್ ಹಿಂದಿ ಭಾಷೆಯ ರಿಮೇಕ್ ಹಕ್ಕುಗಳನ್ನು ಖರೀದಿಸಿದೆ. ಕನ್ನಡದಲ್ಲಿ ಚಿತ್ರೀಕರಣ ಮುಗಿಸಿರುವ ರಿಂಕು ಸದ್ಯಕ್ಕೆ ಬೇರೆ ಯಾವ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ ಅವರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಯಾರಿ ನಡೆಸಬೇಕಿದೆ ಎಂದು ತಿಳಿಸುತ್ತಾರೆ ನಿರ್ದೇಶಕ ಎಸ್ ನಾರಾಯಣ್.
“ಅವರ ಪರೀಕ್ಷೆಯ ನಂತರ, ಸೈರಾಟ್ ನಿರ್ದೇಶಕರ ಜೊತೆ ಮುಂದಿನ ಯೋಜನೆ ಪ್ರಾರಂಭಿಸಲಿದ್ದು, ನಂತರ ಇತರ ಯೋಜನೆಗಳ ಬಗ್ಗೆ ಚಿಂತಿಸಲಿದ್ದಾರೆ” ಎನ್ನುತ್ತಾರೆ ನಿರ್ದೇಶಕ ನಾರಾಯಣ್.
ಈಮಧ್ಯೆ ಎಸ್ ನಾರಾಯಣ್ ಖ್ಯಾತ ಖಳನಾಯಕ ಸತ್ಯಪ್ರಕಾಶ್ ಅವರ ಪುತ್ರನನ್ನು ನಾಯಕ ನಟನಾಗಿ ಪರಿಚಯಿಸಲಿದ್ದು, ಚಿತ್ರರಂಗಕ್ಕಾಗಿಯೇ ಅವರಿಗೆ ಹೊಸ ಹೆಸರು ನೀಡಿರುವುದಾಗಿ ಹೇಳುತ್ತಾರೆ. “ಇನ್ನು ಮುಂದೆ ಅವರು ನಿಶಾಂತ್ ಆಗಿ ಪರಿಚಯವಾಗಲಿದ್ದಾರೆ” ಎನ್ನುತ್ತಾರೆ ನಾರಾಯಣ್.
ಮರಾಠಿ ಮೂಲ ಚಿತ್ರವನ್ನು ನಾಗರಾಜ್ ಮಂಜುಳೆ ನಿರ್ದೇಶಿಸಿದ್ದರು ಮತ್ತು ಆಕಾಶ್ ತೋಷರ್ ಪ್ರಧಾನ ನಟನಾಗಿ ಕಾಣಿಸಿಕೊಂಡಿದ್ದರು.

Comments are closed.