ಮನೋರಂಜನೆ

ನಟ ಅರ್ಬಾಜ್‌ ಖಾನ್‌ರಿಂದ ವಿಚ್ಛೇದನ ಬಯಸಿರುವ ಮಲೈಕಾ ಕೇಳಿರುವ ಹಣವೆಷ್ಟು ಗೊತ್ತಾ..?

Pinterest LinkedIn Tumblr

arbaz-khan

ಸೆಲೆಬ್ರಿಟಿಗಳ ಅದ್ಧೂರಿ ಮದ್ವೆ, ಡೈವೋರ್ಸಿನ ಜೀವನಾಂಶ ಸದಾ ಅಚ್ಚರಿಯ ಸಂಗತಿ. ನಟಿ ಮಲೈಕಾ ಅರೋರಾ ಕೂಡ ಇದೇ ಕಾರಣಕ್ಕೇ ಸುದ್ದಿಯಲ್ಲಿದ್ದಾರೆ. ಪತಿ, ಸಲ್ಮಾನ್‌ಖಾನ್‌ ಸಹೋದರ ಅರ್ಬಾಜ್‌ ಖಾನ್‌ರಿಂದ ವಿಚ್ಛೇದನ ಬಯಸಿರುವ ಮಲೈಕಾ ಬರೋಬ್ಬರಿ .10 ಕೋಟಿ ಜೀವನಾಂಶ ನೀಡುವಂತೆ ಬಾಂದ್ರಾದ ಫ್ಯಾಮಿಲಿ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಮಲೈಕಾ ಬೇಡಿಕೆ ಇಷ್ಟಕ್ಕೇ ಸೀಮಿತವಾಗಿಲ್ಲ. ಮಗನ ಶಿಕ್ಷಣಕ್ಕಾಗಿ ಪ್ರತಿ ತಿಂಗಳು . 5 ಲಕ್ಷ, 2 ಕೋಟಿ ಮೊತ್ತದ ಲಕ್ಷುರಿ ಕಾರು, ಅಪಾರ್ಟ್‌ಮೆಂಟ್‌ ಕೂಡ ನೀಡಬೇಕೆಂದು ಅರ್ಜಿಯಲ್ಲಿ ಬಯಸಿದ್ದಾರೆ. ಇವೆಲ್ಲದರ ಜೊತೆಗೆ . 2.50 ಲಕ್ಷ ಠೇವಣಿಯನ್ನೂ ಅವರು ಕೇಳಿದ್ದಾರೆ. ಆದರೆ, ಇವ್ಯಾವ ಬೇಡಿಕೆ ಈಡೇರಿಸಲೂ ಅರ್ಬಾಜ್‌ ತಯಾರಿಲ್ಲ. ‘ಇದು ಜೀವನಾಂಶವಲ್ಲ. ನನ್ನ ಸುಲಿಗೆ. ದುಡ್ಡಿನ ಮೇಲೆ ಮೋಹ ಇಟ್ಟುಕೊಂಡೇ ಮಲೈಕಾ ನನ್ನ ಬದುಕಿನಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದಾಳೆ’ ಎಂದು ಅರ್ಬಾಜ್‌ ಆರೋಪಿಸುತ್ತಿದ್ದಾರೆ. ಜೀವನಾಂಶ ವಿಚಾರದಲ್ಲಿ ಇಬ್ಬರೂ ರಾಜಿ ಆಗುವಂತೆ ಬಾಂದ್ರಾ ಕೋರ್ಟ್‌ ಸೂಚಿಸಿದೆ.

Comments are closed.