ಮನೋರಂಜನೆ

ದಾಂಪತ್ಯ ಜೀವನಕ್ಕೆ ನಟಿ ಭಾವನಾ

Pinterest LinkedIn Tumblr

bhavana
ಬೆಂಗಳೂರು: ಬಹುಭಾಷಾ ನಟಿ ಭಾವನಾ ಚಿತ್ರ ನಿರ್ಮಾಪಕ ನವೀನ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಈ ಸುದ್ದಿಯನ್ನು ಸ್ವತಃ ಖಚಿತ ಪಡಿಸಿರುವ ಭಾವನಾ ತಾಯಿ ಪುಷ್ಪಾ ‘ನಾವಿನ್ನು ಭಾವನಾ ಮದುವೆಯ ದಿನಾಂಕವನ್ನು ನಿಗದಿಪಡಿಸಿಲ್ಲ. ಆದರೆ, ಮಾಧ್ಯಮಗಳು ಈಗಾಗಲೇ ಅವಳ ಮದುವೆ ವಿಚಾರವಾಗಿ ನಮಗೂ ತಿಳಿದಿರದ ಹಲವು ಕುತೂಹಲಕಾರಿ ಸಂಗತಿಗಳನ್ನು ಹರಿ ಬಿಟ್ಟಿವೆ.ಇನ್ನಷ್ಟು ವಿಚಾರಗಳನ್ನು ತಿಳಿಯುವ ಕಾತರದಲ್ಲಿದ್ದೇನೆ’ ಎಂದು ಕಿಚಾಯಿಸಿದ್ದಾರೆ.

‘ಭಾವನಾ ಮದುವೆಯನ್ನು ಆಕೆಯ ತಂದೆ ಬದುಕಿದ್ದಾಗಲೇ ನಿರ್ಧಾರ ಮಾಡಿದ್ದೆವಾದರೂ ದಿನಾಂಕವನ್ನು ಗೊತ್ತು ಪಡಿಸಿರಲಿಲ್ಲ. ಖಂಡಿತ ಮದುವೆಯ ಸುದ್ದಿಯನ್ನು ತಿಳಿಸಲಿದ್ದೇವೆ’ ಎಂದು ಹೇಳಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಜೊತೆ ‘ಜಾಕಿ’ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದ ಭಾವನಾ ಆನಂತರ ಸುದೀಪ್‌ ಅಭಿನಯದ ‘ವಿಷ್ಣುವರ್ಧನ’ ಚಿತ್ರದಲ್ಲಿಯೂ ನಾಯಕಿಯಾಗಿ ಮಿಂಚಿದ್ದರು.

ಕನ್ನಡ, ತಮಿಳು, ತೆಲುಗು, ಮಲೆಯಾಳಂ ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿರುವ ಭಾವನಾ ಸಪ್ತಪದಿ ತುಳಿಯಲು ಹೊರಟಿರುವುದು ಕನ್ನಡದಲ್ಲಿ ತಮ್ಮ ನಟನೆಯ ಮೂರನೇ ಚಿತ್ರ ‘ರೋಮಿಯೋ’ದ ನಿರ್ಮಾಪಕ ನವೀನ್ ಜೊತೆ.

‘ಸದ್ಯ ಮಲಯಾಳಂನ ‘ಹನೀ ಬೀ’ ಚಿತ್ರದ ಎರಡನೇ ಭಾಗದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಭಾವನಾ ಮದುವೆ ದಿನಾಂಕವನ್ನು ಖಚಿತ ಪಡಿಸಲಿದ್ದು, ಮದುವೆಯ ನಂತರ ನಟಿಸುವ ನಿರ್ಧಾರವನ್ನೂ ಸಹ ತಾವೇ ಕೈಗೊಳ್ಳಲಿದ್ದಾರೆ’ ಎಂದು ಪುಷ್ಪಾ ತಿಳಿಸಿದ್ದಾರೆ.

ತಮ್ಮ ಮದುವೆಯ ಬಗ್ಗೆ ಈ ವರೆಗೂ ಗುಟ್ಟು ಬಿಟ್ಟುಕೊಟ್ಟಿರದ ಭಾವನಾ ತಮ್ಮ ಬಾಳ ಸಂಗಾತಿಯಾಗಲಿರುವ ನವೀನ್‌ ರನ್ನು 2012ರಲ್ಲಿ ‘ರೋಮಿಯೋ’ ಚಿತ್ರದ ಶೂಟಿಂಗ್‌ ವೇಳೆ ಮೊದಲು ಭೇಟಿಯಾಗಿದ್ದರು.

Comments are closed.