ಮನೋರಂಜನೆ

ಜೀರೋ ಸೈಜ್ ಗಾಗಿ ಆರೋಗ್ಯ ಕೆಡಿಸಿಕೊಳ್ಳಬೇಡಿ

Pinterest LinkedIn Tumblr

Sonakshi-Sinhaಬೇರೆ ನಟಿಯರಿಗಿಂತ ಸೋನಾಕ್ಷಿ ಸಿನ್ಹಾ ಕೊಂಚ ದಪ್ಪಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆಲ್ಲ ಅವರು ತಲೆ ಕೆಡಿಸಿಕೊಳ್ಳುವವರೂ ಅಲ್ಲ. ಹಾಗಿದ್ದರೂ ಇತ್ತೀಚೆಗೆ ಸ್ಲಿಮ್ ಆಗುವ ಕುರಿತು ಗಮನ ಹರಿಸಿದ್ದಾರಂತೆ. ಹಾಗಂತ ಕಠಿಣವಾದ ಡಯೆಟ್ ಪಾಲಿಸುತ್ತ, ಜಿಮ್ಲ್ಲಿ ಕಸರತ್ತು ಮಾಡುತ್ತಿದ್ದಾರೆ ಎಂದುಕೊಳ್ಳಬೇಡಿ. ಜೀರೋ ಸೈಜ್ ಬದಲಿಗೆ ಫಿಟ್ ಆಗಿದ್ದರೆ ಸಾಕು ಎಂಬುದಷ್ಟೇ ಅವರ ಆಶಯ. ಕಾಲೇಜು ದಿನಗಳಿಂದಲೇ ಸೋನಾಕ್ಷಿ ತೂಕದ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದರಂತೆ. ಆದರೆ ಅವರು ಅಂಥ ಮಾತುಗಳಿಗೆ ಕಿವಿಗೊಡಲಿಲ್ಲ. ಯಾರೋ ಏನೋ ಹೇಳುತ್ತಾರೆ ಎಂಬುದಕ್ಕಾಗಿ ಅವರು ಜೀರೋ ಸೈಜ್ ಪ್ರಯತ್ನಿಸಲಿಲ್ಲ. ‘ಆರೋಗ್ಯದ ಸಲುವಾಗಿ ಮಾತ್ರ ನಾನು ಜಿಮ್ಲ್ಲಿ ವರ್ಕೌಟ್ ಮಾಡುತ್ತೇನೆ. ಎಲ್ಲ ಯುವತಿಯರಿಗೂ ಇದೇ ನನ್ನ ಸಲಹೆ. ನಿಮ್ಮ ದೇಹವನ್ನು ಮತ್ತೊಬ್ಬರ ಜತೆ ಹೋಲಿಸಿಕೊಳ್ಳಬೇಡಿ. ಸ್ಲಿಮ್ ಆಗುವ ಅಥವಾ ತೂಕ ಹೆಚ್ಚಿಸಿಕೊಳ್ಳುವುದಕ್ಕಾಗಿ ಆರೋಗ್ಯ ಕೆಡಿಸಿಕೊಳ್ಳಬೇಡಿ’ ಎಂಬುದಾಗಿ ಸೋನಾಕ್ಷಿ ಕಿವಿಮಾತು ಕೇಳಿದ್ದಾರೆ. ಪ್ರಸ್ತುತ ಗ್ಲಾಮರ್ ಜಗತ್ತಿನಲ್ಲಿ ಬಾಡಿ ಶೇಮಿಂಗ್ ಹಾವಳಿ ಹೆಚ್ಚಾಗಿದ್ದು, ಅದು ಸೋನಾಕ್ಷಿಗೆ ಆತಂಕ ಮೂಡಿಸಿದೆ. ಅದನ್ನು ಎದುರಿಸಿ ನಿಲ್ಲಲು ಇತರೆ ಯುವತಿಯರಿಗೆ ಅವರು ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಸೋನಾಕ್ಷಿ ನಟನೆಯ ‘ಫೋರ್ಸ್ 2’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಅದರ ಬಗ್ಗೆ ಹೆಚ್ಚೇನೂ ಬೇಸರಿಸಿಕೊಳ್ಳದ ಅವರು ‘ನೂರ್’ ಚಿತ್ರದ ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲಿ ಅವರು ಪತ್ರಕರ್ತೆಯ ಪಾತ್ರ ನಿಭಾಯಿಸುತ್ತಿದ್ದಾರೆ.

Comments are closed.