ಮನೋರಂಜನೆ

ಆರ್ಜಿವಿಯಲ್ಲಿ ಸೊಂಟ ಬಳಕಿಸಲು ಶುಭಾ ಪೂಂಜಾ ಎಂಟ್ರಿ

Pinterest LinkedIn Tumblr

shubhaಬೆಂಗಳೂರು: ‘ಜೈ ಮಾರುತಿ 800’ ಸಿನಿಮಾ ನಂತರ ನಟಿ ಶುಭಾ ಪೂಂಜಾ ಸಖತ್ ಬಿಜಿಯಾಗಿದ್ದಾರೆ. ಬರೋಬ್ಬರಿ ಐದು ಚಿತ್ರಗಳು ಈಗ ಅವರ ಕೈಯಲ್ಲಿವೆ. ವಿಜಯ್ ರಾಘವೇಂದ್ರ ಹಾಗೂ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಜತೆಗಿನ ಇನ್ನೂ ನಾಮಕರಣವಾಗದ ಎರಡು ಚಿತ್ರದಲ್ಲಿ ಶುಭಾ ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್ಗಳ ಶೂಟಿಂಗ್ ಸದ್ಯ ಭರದಿಂದ ಸಾಗಿದೆ. ಜತೆಗೆ ಯುವ ನಿರ್ದೇಶಕ ಪ್ರತಾಪ್ ಆರ್ಯನ್ ಆಕ್ಷನ್-ಕಟ್ ಹೇಳುತ್ತಿರುವ ‘ನವೆಂಬರ್ 19’ ಎಂಬ ಶೀರ್ಷಿಕೆಯ ಚಿತ್ರಕ್ಕೂ ಶುಭಾ ನಾಯಕಿ. ಇವುಗಳೊಂದಿಗೆ ಇನ್ನೂ ಎರಡು ಚಿತ್ರಗಳು ಮಾತುಕತೆ ಹಂತದಲ್ಲಿವೆಯಂತೆ. ಈ ಗ್ಯಾಪ್ನಲ್ಲಿಯೇ ಮತ್ತೊಂದು ಚಿತ್ರದ ವಿಶೇಷ ಹಾಡಿಗೆ ಸೊಂಟ ಬಳುಕಿಸಲು ಈ ಬಬ್ಲಿ ಸುಂದರಿ ಸಜ್ಜಾಗಿದ್ದಾರೆ.

ಹೌದು, ಶ್ಯಾಮ್ ನಿರ್ದೇಶಿಸುತ್ತಿರುವ ‘ಆರ್ಜಿವಿ’ ಚಿತ್ರದಲ್ಲಿ ಶುಭಾ ಗಂಡಸರಿಗೆ ಬುದ್ಧಿ ಹೇಳಲು ಮುಂದಾಗಿದ್ದಾರೆ. ‘ಮುದ್ದು ಮನಸೇ’ ಖ್ಯಾತಿಯ ಅರು ಗೌಡ ನಾಯಕನಾಗಿರುವ ಈ ಚಿತ್ರದ ವಿಶೇಷ ಹಾಡಿನಲ್ಲಿ ಶುಭಾ ಪುರುಷರಿಗೆ ಪಂಚ್ ಕೊಡುತ್ತಿದ್ದಾರೆ. ‘ನೀವು ಮಾತ್ರ ಕುಡಿಬೇಕಾ ನಶೆ ಬರೋಕೆ…’ ಎಂದು ಸಾಗುವ ಹಾಡಿಗೆ ಶುಭಾ ಪೆಗ್ ಹಿಡಿದು ಮಸ್ತ್ ಮಸ್ತ್ ಹೆಜ್ಜೆ ಹಾಕಿದ್ದಾರೆ.

ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ, ಕೌಶಿಕ್ ಹರ್ಷ ಸಂಗೀತದಲ್ಲಿ ಈ ಸ್ಪೆಷಲ್ ಸಾಂಗ್ ಮೂಡಿಬಂದಿದೆ. ಈ ಒಂದೇ ಹಾಡಿಗಾಗಿ ಸುಮಾರು ಎರಡು ತಿಂಗಳು ತಯಾರಿ ನಡೆಸಿದ್ದರಂತೆ ಶುಭಾ. ಮೇಕಪ್, ಮೇಕ್ ಓವರ್, ಕಾಸ್ಟೂ್ಯಮ್ ಬಾಡಿ ಶೇಪ್ ಮುಂತಾದ ವಿಚಾರಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ,

‘ಆರ್ಜಿವಿ’ ಅಡ್ಡಕ್ಕೆ ಅವರು ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಅಂದರೆ ಈ ಹಾಡಿಗೆ ಸ್ವತಃ ಶುಭಾ ವಸ್ತ್ರವಿನ್ಯಾಸ ಮಾಡಿಕೊಂಡಿದ್ದು, ಪಕ್ಕಾ ಮರಾಠಿ ಶೈಲಿಯಲ್ಲಿ ಮಿಂಚಿದ್ದಾರೆ. ಚಂದ್ರಿಕಾ ನೃತ್ಯ ಸಂಯೋಜನೆ ಮಾಡಿದ್ದು, ನೆಲಮಂಗಲದ ಬಳಿ ಡಾಬಾದ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ವಿವಾದಗಳಿಂದಲೇ ಸದ್ದು ಮಾಡುವ ನಿರ್ದೇಶಕ ರಾಮ್ ಗೋಪಾಲ್ ವರ್ವ ಹೆಸರನ್ನೇ ಬಿಂಬಿಸುವ ಟೈಟಲ್ ಹಾಗೂ ಆಟೋ ಚಾಲಕರೇ ಸೇರಿ ನಿರ್ಮಾಣ ಮಾಡುತ್ತಿರುವ ಕಾರಣಕ್ಕೆ ಸ್ಯಾಂಡಲ್ವುಡ್ನಲ್ಲಿ ಕೊಂಚಮಟ್ಟಿಗೆ ಈ ಚಿತ್ರ ಕುತೂಹಲ ಕೆರಳಿಸಿದೆ. ಡಾರ್ಕ್ ಕಾಮಿಡಿ ವರ್ಗಕ್ಕೆ ಸೇರುವ

‘ಆರ್ಜಿವಿ’ಯಲ್ಲಿ ಅರು ಗೌಡ ಜತೆ ಐಶ್ವರ್ಯಾ, ಉಪಾಸನಾ, ಅರೋಹಿತ ಗೌಡ ಹಾಗೂ ಅಕ್ಷತಾ ನಟಿಸಿದ್ದಾರೆ. ಈಗಾಗಲೇ ಶೇ. 95 ಭಾಗ ಚಿತ್ರೀಕರಣ ಮುಕ್ತಾಯಗೊಂಡಿದೆ.

Comments are closed.