ಮನೋರಂಜನೆ

ವರದಕ್ಷಿಣೆ ಕಿರುಕುಳ: ದುನಿಯಾ ವಿಜಿ ಪತ್ನಿ ನಾಗರತ್ನ ವಿರುದ್ಧ ದೂರು

Pinterest LinkedIn Tumblr

Duniya-Vijay-and-his-wifeಬೆಂಗಳೂರು: ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ನಟ ದುನಿಯಾ ವಿಜಯ್‌ ಅವರ ಮೊದಲ ಪತ್ನಿ ನಾಗರತ್ನ ಸೇರಿದಂತೆ 11 ಮಂದಿ ಸಂಬಂಧಿಕರ ವಿರುದ್ಧ ಶನಿವಾರ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.
ನಾಗರತ್ನ ಅವರ ತಮ್ಮ ಕೃಷ್ಣಮೂರ್ತಿಯ ಪತ್ನಿ ಮೀನಾಕ್ಷಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದು, ಇದಕ್ಕೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿದೆ. ಈ ಸಂಬಂಧ ವಿಜಿ ಪತ್ನಿ ನಾಗರತ್ನ, ಅವರ ತಂದೆ ರುದ್ರಪ್ಪ, ತಾಯಿ ಯಶೋದಮ್ಮ, ನಾಗರತ್ನ ಸಹೋದರಿಯರಾದ ಶಶಿಕಲಾ, ರಾಧಮ್ಮ ಸೇರಿದಂತೆ 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗಿದೆ ಎಂದು ಆನೇಕಲ್ ಪೊಲೀಸರು ತಿಳಿಸಿದ್ದಾರೆ.
ಇಂಡ್ಲವಾಡಿ ಗ್ರಾಮದಲ್ಲಿ ನಾಗರತ್ನ ತಮ್ಮ ಕೃಷ್ಣಮೂರ್ತಿ ಪತ್ನಿ ಮೀನಾಕ್ಷಿ (25) ವರದಕ್ಷಿಣೆ ಕಿರುಕುಳದಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಬೊಮ್ಮಸಂದ್ರ ನಾರಯಾಣ ಹೆಲ್ತ್‌ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೀನಾಕ್ಷಿ ಸ್ಥಿತಿ ಈಗ ಚಿಂತಾಜನಕವಾಗಿದೆ ಎಂದು ಹೇಳಲಾಗಿದ್ದು ಆಕೆಯ ಪೋಷಕರು ಪೊಲೀಸರಿಗೆ ಕಿರುಕುಳ ನೀಡಿದ ದೂರು ನೀಡಿದ್ದಾರೆ.

Comments are closed.