ಕಾನ್ಪುರ: ಇಲ್ಲಿನ ದೆಹಾತ್ ಜಿಲ್ಲೆಯಲ್ಲಿ ಬ್ಯಾಂಕ್ನಿಂದ ಹಣ ವಿತ್ಡ್ರಾ ಮಾಡುವುದಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ ಗರ್ಭಿಣಿಯೊಬ್ಬರು ಬ್ಯಾಂಕ್ನೊಳಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಸತತ ಎರಡು ದಿನಗಳಿಂದ ಸರ್ವೇಶಾ ಎಂಬ ಮಹಿಳೆ ತಮ್ಮ ಅತ್ತೆಯೊಂದಿಗೆ ಬ್ಯಾಂಕ್ಗೆ ಬರುತ್ತಿದ್ದು, ಶುಕ್ರವಾರ ಮಗುವಿಗೆ ಜನ್ಮ ನೀಡಿದ್ದಾರೆ. ಬ್ಯಾಂಕ್ ಬಳಿ ಆ್ಯಂಬುಲೆನ್ಸ್ ಬರಲು ಕಷ್ಟವಾಗಿರುವುದರಿಂದ ಪೊಲೀಸರೇ ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿರುವ ಮಹಿಳೆ ಅಸ್ವಸ್ಥರಾಗಿದ್ದು, ಮಗು ಆರೋಗ್ಯವಾಗಿದೆ ಎಂದು ಸರ್ವೇಶಾಳ ಅತ್ತೆ ತಿಳಿಸಿದ್ದಾರೆ.
ಸರ್ವೇಶಾಳ ಪತಿ ಈ ವರ್ಷಾರಂಭಕ್ಕೆ ಅಪಘಾತವೊಂದರಲ್ಲಿ ಸಾವಿಗೀಡಾಗಿದ್ದರು. ಹಾಗಾಗಿ ಸರ್ಕಾರದಿಂದ ಸಿಗುವ ಪರಿಹಾರ ಧನವನ್ನು ಪಡೆಯಲು ಆಕೆ ಬ್ಯಾಂಕ್ ಗೆ ಬಂದಿದ್ದಳು.
ಗುರುವಾರ ಬ್ಯಾಂಕ್ಗೆ ಬಂದಾಗ ಅಲ್ಲಿ ದುಡ್ಡಿಲ್ಲ ಎಂದು ಹೇಳಿ ಸರ್ವೇಶಾ ಮತ್ತು ಅತ್ತೆ ಹಿಂತಿರುಗಿದ್ದರು.
ಶುಕ್ರವಾರ ಸಂಜೆ 4 ರವೇಳೆಗೆ ಬ್ಯಾಂಕ್ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ಬ್ಯಾಂಕ್ನೊಳಗೆ ಆಕೆಯ ಪ್ರಸವ ನಡೆದಾಗ ನಾನು ಭಯಗೊಂಡಿದ್ದೆ. ನಾನು ಸೊಸೆಯನ್ನೂ ಕಳೆದುಕೊಂಡು ಬಿಡುತ್ತೀನೋ ಎಂಬ ಭಯ ನನ್ನದಾಗಿತ್ತು. ಆಕೆ ಚೆಂದದ ಮಗುವೊಂದನ್ನು ನಮಗೆ ನೀಡಿದ್ದಾಳೆ ಎಂದು ಸರ್ವೇಶಾಳ ಅತ್ತೆ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
Comments are closed.