ಮನೋರಂಜನೆ

‘ಟಗರು’ ಗಾಗಿ ಶಿವರಾಜ್ ಕುಮಾರ್ ವಿಭಿನ್ನ ಹೇರ್ ಸ್ಟೈಲ್

Pinterest LinkedIn Tumblr

tagaru

ದುನಿಯಾ ಸೂರಿ ಹಾಗೂ ಶಿವರಾಜಕುಮಾರ್ ಕಾಂಬಿನೇಶನ್ ನ ಎರಡನೇ ಚಿತ್ರ ‘ಟಗರು’ ಗಾಗಿ ಶಿವರಾಜ್ ಕುಮಾರ್ ವಿಭಿನ್ನ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ.

ಈ ಇಬ್ಬರ ಕಾಂಬಿನೇಶನ್ ನ ಮೊದಲ ಚಿತ್ರ ಕಡ್ಡಿಪುಡಿಯಲ್ಲಿ ಸಾಧಾರಣ ವ್ಯಕ್ತಿಯಂತೆ ನಟಿಸಿದ್ದ ಶಿವರಾಜ್ ಕುಮಾರ್ ಟಗರು ಚಿತ್ರಕ್ಕಾಗಿ ಸಖತ್ ಟ್ರೆಂಡಿಯಾಗಿದ್ದಾರೆ. ಶಿವಣ್ಣ ಸಿನಿಮಾದುದ್ದಕ್ಕೂ ಹೊಸ ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಹಂತ ಮುಗಿಸಿರುವ ಟಗರು ದ್ವಿತೀಯ ಹಂತದ ಚಿತ್ರೀಕರಣ ಡಿಸೆಂಬರ್ 12ರಿಂದ ಆರಂಭವಾಗಲಿದೆ.

ಚಿತ್ರವನ್ನು ಕೆಪಿ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಧನಂಜಯ್ ವಿಲನ್ ಆಗಿ ನಟಿಸುತ್ತಿದ್ದು ಅವರ ಗೆಟಪ್ ಕೂಡ ಬದಲಾಗಿದೆ. ಶಿವಣ್ಣನಿಗೆ ಜತೆಯಾಗಿ ಕೆಂಡಸಂಪಿಗೆ ಚಿತ್ರದ ನಾಯಕಿ ಮಾನ್ವಿತಾ ಹರೀಶ್ ಅಭಿನಯಿಸುತ್ತಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.

Comments are closed.