ಮನೋರಂಜನೆ

ಯಶ್‌–ರಾಧಿಕಾ ಮದುವೆಗೆ ಪ್ರಮುಖರಿಗೆ ಅಮಂತ್ರಣ

Pinterest LinkedIn Tumblr

yashಬೆಂಗಳೂರು: ಚಂದನವನದ ತಾರೆಯರಾದ ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ಪಂಡಿತ್‌ ಮದುವೆಗೆ ಕೆಲವೇ ದಿನಗಳಿವೆ. ಸಂಪಿಗೆ ಗಿಡದ ಸಹಿತ ನುಡಿಮುತ್ತನ್ನು ಒಳಗೊಂಡ ಕರೆಯೋಲೆ ನೀಡಿ ಚಿತ್ರರಂಗದ ಪ್ರಮುಖರಿಗೆ ಯಶ್‌ ಮದುವೆಗೆ ಆಮಂತ್ರಿಸುತ್ತಿದ್ದಾರೆ.

ವಸುದೈವ ಕುಟುಂಬಕಂ ಹಣೆ ಬರಹದೊಂದಿಗೆ ಆರಂಭವಾಗುವ ಆಮಂತ್ರಣವು ಎಲ್ಲರನ್ನೂ ಸಂಬಂಧಿಕರಾಗಿ ಕಂಡು, ‘ತಾಳಿಬಿಗಿಯುವುದಾದರೂ ಹೇಗೆ ಹೇಳಿ ನೀವೆಲ್ಲ ಬಾರದೆ?!!’ ಎಂದು ವಿಶೇಷವಾಗಿ ಆಹ್ವಾನವಿತ್ತಿದ್ದಾರೆ.

ಇಲ್ಲಿ ಬರೆಯದ ಪದಗಳೇ ಜಾಸ್ತಿ ಎಂಬುದರೊಂದಿಗೆ ಮದುವೆಗೆ ನಿಮ್ಮ ಹಾಜರಿ ಮುಖ್ಯ ಎಂದಿದ್ದಾರೆ. ಕೊನೆಯಲ್ಲಿ ರಾಧಿಕ ಮತ್ತು ಯಶ್‌ ಹೆಬ್ಬೆಟ್ಟಿನ ಗುರುತಿನಲ್ಲಿ ‘ಹೃದಯ’ ಮುದ್ರಿಸಿದ್ದಾರೆ.

ಈಗಾಗಲೇ ಡಾ.ರಾಜ್‌ಕುಮಾರ್‌ ಕುಟುಂಬ, ಅನಂತ್‌ನಾಗ್‌, ಕುಮಾರ್‌ ಬಂಗಾರಪ್ಪ ಸೇರಿದಂತೆ ಹಲವರಿಗೆ ಸಂಪಿಗೆ ಗಿಡ ಮತ್ತು ಪುಸ್ತಕದೊಂದಿಗೆ ಕರೆಯೋಲೆ ನೀಡಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

‘ಮನೆಯ ಹಿತ್ತಲಲ್ಲೋ, ಪಕ್ಕದ ಪಾರ್ಕಲ್ಲೋ ಸಂಪಿಗೆ ಗಿಡ ನೆಟ್ಟರೆ ಸಿಗೋ ಸಂತೋಷವೇ ಬೇರೆ ಅಲ್ವ’ –ಯಶೋಮಾರ್ಗದ ಮೂಲಕ ಸಂಪಿಗೆ ಗಿಡ ಹಂಚುವ ಜೊತೆಗೆ ಈ ಸಂದೇಶವನ್ನೂ ಇಟ್ಟಿದ್ದಾರೆ.

ಅರಮನೆ ಮೈದಾನದಲ್ಲಿ ಆರತಕ್ಷತೆ:
ಡಿಸೆಂಬರ್‌ 10ರಂದು ಸಂಜೆ 7 ಗಂಟೆಯಿಂದ ಆರತಕ್ಷತೆ ನಿಗದಿಯಾಗಿದೆ. ಅರಮನೆ ಮೈದಾನ ‘ತ್ರಿಪುರ ವಾಸಿನಿ’ಯಲ್ಲಿ ಆರತಕ್ಷತೆ ನಡೆಯಲಿದೆ.

ಮಿಸ್ಟರ್‌ ಅಂಡ್‌ ಮಿಸಸ್‌ ರಾಮಾಚಾರಿ ಮದುವೆ ಕುರಿತು ಅಭಿಮಾನಿಗಳಲ್ಲಿ ಸಹಜ ಕುತೂಹಲವಿದೆ. ಮದುವೆ ಆಮಂತ್ರಣದಲ್ಲಿ ಸರಳ ಮತ್ತು ಪರಿಸರ ಸ್ನೇಹಿ ತತ್ವವನ್ನು ಅಳವಡಿಸಿಕೊಂಡಿರುವುದು ಮದುವೆಯ ಬಗೆಗೂ ಸುಳಿವು ಕೊಟ್ಟಂತಿದೆ.

Comments are closed.