ಕರ್ನಾಟಕ

ಮಹಿಳಾ ಟೆಕ್ಕಿಗೆ ಕಿರುಕುಳ ನೀಡಿದ್ದ ಹೈದ್ರಾಬಾದ್‍ ಟೆಕ್ಕಿಯ ಬಂಧನ

Pinterest LinkedIn Tumblr

arrestಬೆಂಗಳೂರು: ಪ್ರೀತಿಯನ್ನು ನಿರಾಕರಿಸಿದ ಪ್ರಿಯತಮೆಗೆ ಕಿರುಕುಳ ನೀಡುತ್ತಿದ್ದ ಹೈದ್ರಾಬಾದ್ ಮೂಲದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೋರೆನ್ ಕೆ.ರಾಜು ಬಂಧಿತ ಸಾಫ್ಟ್ ವೇರ್ ಎಂಜಿನಿಯರ್. ರಾಜು ಈ ಹಿಂದೆ ಬೆಂಗಳೂರಿನ ಟಿಸಿಎಸ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿಗೆ ಪ್ರಪೋಸ್ ಮಾಡಿದ್ದ. ಈ ವೇಳೆ ಪ್ರಿಯತಮೆ ಪ್ರೀತಿ ನಿರಾಕರಿಸಿ ಎಲ್ಲಾ ಸ್ನೇಹಿತರ ಮುಂದೆ ಅವಮಾನ ಮಾಡಿದ್ದಳು.

ಅವಮಾನ ಮಾಡಿದ ಹಿನ್ನೆಲೆಯಲ್ಲಿ ರಾಜು ಸೇಡು ತೀರಿಸಿಕೊಳ್ಳುವ ಸಲುವಾಗಿ ಆಕೆಯ ಲ್ಯಾಪ್‍ಟಾಪ್‍ನಿಂದ ಅವಳ ಫೋಟೋ ಕದ್ದು ಅಶ್ಲೀಲ ದೇಹಕ್ಕೆ ಪ್ರಿಯತಮೆಯ ಮುಖ ಸೇರಿಸಿ ಎಲ್ಲರಿಗೂ ರಾಜು ಕಳುಹಿಸುತ್ತಿದ್ದ.

ದೂರು ದಾಖಲಾದ ವಿಚಾರ ತಿಳಿಯುತ್ತಿದ್ದಂತೆ ರಾಜು ಮೂರು ದಿನಗೊಳಿಗೊಮ್ಮೆ ಮೊಬೈಲ್ ನಂಬರ್ ಬದಲಾಯಿಸುತ್ತಿದ್ದ. ಕೊನೆಗೂ ಸೈಬರ್ ಕ್ರೈಂ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಎಚ್‍ಎಎಲ್ ಪೊಲೀಸರು ಬೋರೆನ್ ಕೆ. ರಾಜುನನ್ನು ಬಂಧಿಸಿದ್ದಾರೆ.

Comments are closed.