ಕರ್ನಾಟಕ

ಡಿ.2ರಂದು ನಡೆಯುವ 82ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

Pinterest LinkedIn Tumblr

rcr-2ರಾಯಚೂರು: 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಯಚೂರು ನಗರ ಈಗ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಇಡೀ ನಗರದಲ್ಲಿ ಸಂಭ್ರಮ ಮನೆಮಾಡಲು ಜಿಲ್ಲಾಡಳಿತ ಭರದ ಸಿದ್ದತೆ ನಡೆಸಿದೆ.

ಡಿಸೆಂಬರ್ 2ರಿಂದ ಮೂರು ದಿನ ರಾಯಚೂರಿನಲ್ಲಿ ನಡೆಯೋ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಸಂಸ್ಕೃತಿ ಬಿಂಬಿಸುವ ಚಿತ್ರಗಳ ಪೇಟಿಂಗ್ ಕಾರ್ಯ, ಮುಖ್ಯ ವೇದಿಕೆ ಹಾಗೂ ಪರ್ಯಾಯ ವೇದಿಕೆಗಳು ಸಿದ್ದವಾಗ್ತಿದೆ.

ಸಮ್ಮೇಳನದ ಸಿದ್ದತೆಯಲ್ಲೇ ಅಸಮಾಧಾನದ ಮಾತುಗಳು ಕೂಡ ಕೇಳಿ ಬರ್ತಿದೆ. ತಮ್ಮನ್ನು ಸಮ್ಮೇಳನಕ್ಕೆ ಆಹ್ವಾನಿಸಿಲ್ಲ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುದೇಂದ್ರ ತೀರ್ಥರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕಸಾಪ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಿ ಎಂದು ಮಠಾಧೀಶರಿಗೆ ವಿಶೇಷ ಆಹ್ವಾನ ನೀಡುವುದಿಲ್ಲ ಎಂದಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲೇ, ಶೇಕಡಾ 60 ರಷ್ಟು ರೂಂಗಳನ್ನ ಸಮ್ಮೇಳನದ ಅಥಿತಿಗಳಿಗೆ ನೀಡುತ್ತೇವೆ ಎಂದಿದ್ದ ನಗರದ ಹೋಟೆಲ್ ಮಾಲೀಕರು ದಿಢೀರ್ ಅಂತಾ ಹಿಂದೆ ಸರಿದಿದ್ದಾರೆ. ಇದ್ರಿಂದ ಜಿಲ್ಲಾಡಳಿತ ಕಂಗಾಲಾಗಿದೆ.

Comments are closed.