ಮನೋರಂಜನೆ

ಸಲ್ಮಾನ್ ಜೊತೆ ಮದುವೆ ಆಗುವುದಿಲ್ಲವೆಂದ ಲುಲಿಯಾ!

Pinterest LinkedIn Tumblr

luliyaಮುಂಬೈ:ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್‍ರ ಪ್ರೇಯಸಿ ರೋಮೆನಿಯಾ ಬೆಡಗಿ ಲುಲಿಯಾ ವಂಟೂರ ಮರಳಿ ಸ್ವದೇಶಕ್ಕೆ ತೆರಳಿದ್ದು, ಸಲ್ಮಾನ್ ಖಾನ್ ಜೊತೆ ಮದುವೆ ಆಗುವುದಿಲ್ಲ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ರೋಮೆನಿಯಾದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲುಲಿಯಾ ಸಲ್ಮಾನ್ ಖಾನ್ ಜೊತೆಗಿನ ಮದುವೆ ಪ್ರಸ್ತಾಪ ಇಲ್ಲ. ಭಾರತದ ವ್ಯಕ್ತಿಯನ್ನು ಮದುವೆ ಆದರೆ ಅಲ್ಲಿನ ವಿಭಿನ್ನ ಸಂಸ್ಕøತಿಗೆ ಹೊಂದಿಕೊಳ್ಳವುದೇ ನನಗೆ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಆದರೆ ಈಗ ಮಾತ್ರ ಲುಲಿಯಾ ರೋಮೆನಿಯಾಗೆ ಹೋಗಿದ್ದು ಯಾವ ಕಾರಣಕ್ಕಾಗಿ ಎಂದು ತಿಳಿದು ಬಂದಿಲ್ಲ. ಸಲ್ಮಾನ್ ಖಾನ್‍ರ ಆಪ್ತ ಮೂಲಗಳ ಪ್ರಕಾರ ಲುಲಿಯಾ ಪಾಸ್‍ಪೋರ್ಟ್ ನವೀಕರಣಕ್ಕಾಗಿ ರೋಮೆನಿಯಾಗೆ ತೆರಳಿದ್ದಾರೆ ಎಂದು ತಿಳಿಸಿವೆ.

ಕಳೆದ ಒಂದು ವರ್ಷದಿಂದ ಸಲ್ಮಾನ್ ಜೊತೆ ಲುಲಿಯಾ ಹೆಚ್ಚಾಗಿ ಕಾಣಿಸಿಕೊಳ್ಳತ್ತಿದ್ದರು. ಸಲ್ಮಾನ್ ಮತ್ತು ಲುಲಿಯಾ ಇಬ್ಬರೂ ಮದುವೆ ಆಗುತ್ತಾರೆ ಎಂಬು ಗುಸುಗುಸು ಬಾಲಿವುಡ್ ಅಂಗಳದಲ್ಲಿ ಹರದಾಡುತ್ತಿತ್ತು. ಆದರೆ ಕೆಲವು ದಿನಗಳಿಂದ ಇಬ್ಬರೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.

36 ವರ್ಷದ ಲುಲಿಯಾ ಭಾರತದಲ್ಲಿ ಸಲ್ಮಾನ್ ಪೋಷಕರ ಜೊತೆಯೇ ವಾಸವಾಗಿದ್ದರು. ಆದರೆ ಲುಲಿಯಾ ಜೊತೆಗಿನ ಮದುವೆಯ ಬಗ್ಗೆ ಸಲ್ಮಾನ್ ಯಾವುದೇ ಪ್ರತಿಕ್ರಿಯೆಯನ್ನು ಇದೂವರೆಗೆ ನೀಡಿಲ್ಲ.

ಲುಲಿಯಾ ಈಗಾಗಲೇ ತನ್ನ ಮೊದಲ ಪತಿಗೆ ವಿಚ್ಚೇದನ ನೀಡಿದ್ದು, ರೋಮೆನಿಯಾ ಚಾನೆಲ್ ಒಂದರಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಹಿಂದೆ ಐಶ್ವರ್ಯಾ ರೈ ಮತ್ತು ಕತ್ರೀನಾ ಕೈಫ್ ಜೊತೆ ಸಲ್ಮಾನ್ ಖಾನ್ ಹೊಂದಿದ್ದ ಲವ್ ಬ್ರೇಕಪ್ ಆಗಿತ್ತು. ಇದಾದ ಬಳಿಕ ಲುಲಿಯಾ ಜೊತೆ ಸಲ್ಮಾನ್ ಮದುವೆ ಆಗುತ್ತಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಈಗಲೂ ಹರಿದಾಡುತ್ತಿದೆ.

ತನ್ನ ಮದುವೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಸಲ್ಮಾನ್, ತಾನು ನವೆಂಬರ್ 18ರಂದು ಮದುವೆ ಆಗುತ್ತೇನೆ. ಆದರೆ ಯಾವ ವರ್ಷ ಎಂದು ಗೊತ್ತಿಲ್ಲ ಎಂದು ಎರಡು ದಿನಗಳ ಹಿಂದೆ ಹೇಳಿದ್ದರು.

Comments are closed.