ಮನೋರಂಜನೆ

ದುಡಿಯುವ ಗಂಡಸೇ ಸತ್ತ ಮೇಲೆ ಪರಿಹಾರದಿಂದ ಪ್ರಯೋಜನವಿಲ್ಲ: ಭಾರತಿ ವಿಷ್ಣುವರ್ಧನ್

Pinterest LinkedIn Tumblr

bharatiಬೆಂಗಳೂರು: ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್‍ನಲ್ಲಿ ಜಲಸಮಾಧಿ ಆಗಿದ್ದ ಉದಯ್ ಪಾರ್ಥಿವ ಶರೀರ ದರ್ಶನಕ್ಕೆ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅಳಿಯ ಅನಿರುದ್ಧ ತಮ್ಮ ಅಂತಿಮ ನಮನವನ್ನು ಸಲ್ಲಿಸಿದರು.

ದರ್ಶನ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್ ಇದೊಂದು ದೊಡ್ಡ ದುರಂತ. ತಿಳಿದು ತಿಳಿದು ತಪ್ಪು ಮಾಡಬಾರದಿತ್ತು. ಇನ್ನು ಮುಂದೆ ಇಂತಹ ದುರಂತಗಳು ನಡೆಯದಂತೆ ನೋಡಿಕೊಳ್ಳಬೇಕು. ಇಬ್ಬರು ನಟರು ನೀರಿಗಿಳಿಯುವ ಮುನ್ನ ತಮಗೆ ಈಜು ಬರುವುದಿಲ್ಲ ಎಂದು ತಿಳಿಸಿದ್ದಾರೆ. ಚಿತ್ರ ತಂಡ ಲಭ್ಯವಿರುವ ಆಧುನಿಕ ಸೌಕರ್ಯಗಳನ್ನು ಬಳಸಿಕೊಳ್ಳಬಹುದಿತ್ತು. ದುಡಿಯುವ ಗಂಡಸೇ ಸತ್ತ ಮೇಲೆ ಎಷ್ಟು ಪರಿಹಾರ ಕೊಟ್ಟರು ಏನೂ ಪ್ರಯೋಜನವಿಲ್ಲ ಎಂದು ಹೇಳಿದರು.

ಉದಯ್ ನನ್ನ ಕಣ್ಣು ಮುಂದೆಯೇ ಬೆಳೆದ ಹುಡುಗ. ಬಹಳ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದ. ಇವರ ಕುಟುಂಬಕ್ಕೆ ದೇವರು ದುಖಃ ಭರಿಸುವ ಶಕ್ತಿ ಕೊಡಲಿ. ಅನಿಲ್ ಮತ್ತು ಉದಯ್ ಕುಟುಂಬಕ್ಕೆ ತಲಾ 1 ಲಕ್ಷ ರೂಪಾಯಿ ವಯಕ್ತಿಕವಾಗಿ ಪರಿಹಾರ ಕೊಡುತ್ತೇನೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಉದಯ್ ತಂದೆ ವೆಂಕಟೇಶ್ ಮೃತದೇಹವನ್ನು ಹುಡುಕಿಕೊಟ್ಟ ಎಲ್ಲಾ ಪೋಲಿಸ್ ಸಿಬ್ಬಂದಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಸತತ ಮೂರು ದಿನಗಳಿಂದ ಕೆರೆ ಬಳಿಯೇ ಇದ್ದಂತಹ ದುನಿಯಾ ವಿಜಿಗೆ ಧನ್ಯವಾದ ಹೇಳಿದರು. 9.30 ರಿಂದ 10 ಗಂಟೆಯ ಒಳಗೆ ಮೆರವಣಿಗೆ ಮೂಲಕ, ಬನಶಂಕರಿ ರುದ್ರಭೂಮಿಯಲ್ಲಿ ಹಿಂದೂ ಸಂಸ್ಕøತಿಯಂತೆ ಅಂತ್ಯ ಸಂಸ್ಕಾರ ನಡೆಯಲಿದೆ. ಅಂತ್ಯ ಸಂಸ್ಕಾರಕ್ಕೂ ಮುನ್ನ ದುನಿಯಾ ವಿಜಿ ಉದಯ್ ಅಂತಿಮ ದರ್ಶನ ಪಡೆಯಬೇಕೆಂದು ಉದಯ್ ತಂದೆ ವೆಂಕಟೇಶ್ ಮನವಿ ಮಾಡಿಕೊಂಡಿದ್ದಾರೆ.

ಮಾಜಿ ಡಿಸಿಎಂ ಆರ್.ಅಶೊಕ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದ್ ಮತ್ತು ಮುಖ್ಯಮಂತ್ರಿ ಚಂದ್ರು ಉದಯ್ ಅಂತಿಮ ದರ್ಶನವನ್ನು ಪಡೆದರು.

Comments are closed.