ರಾಷ್ಟ್ರೀಯ

ಟಿಸಿಎಸ್ ನಿರ್ದೇಶಕರ ಮಂಡಳಿಗೆ ಹಂಗಾಮಿ ಛೇರ್ಮನ್ ಆಗಿ ಇಷಾತ್ ಹುಸೇನ್ ನೇಮಕ

Pinterest LinkedIn Tumblr

ishaat_hussainನವದೆಹಲಿ(ನ. 10): ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯ ನಿರ್ದೇಶಕರ ಮಂಡಳಿಗೆ ಅಧ್ಯಕ್ಷರಾಗಿ ಇಷಾತ್ ಹುಸೇನ್ ಅವರು ನೇಮಕಗೊಂಡಿದ್ದಾರೆ. ಟಿಸಿಎಸ್’ನಲ್ಲಿ 74% ಪಾಲು ಹೊಂದಿರುವ ಟಾಟಾ ಸನ್ಸ್ ಸಂಸ್ಥೆಯು ಮಂಡಳಿಯ ಹಂಗಾಮಿ ಛೇರ್ಮನ್ ಆಗಿ ಹುಸೇನ್’ರನ್ನು ನೇಮಕ ಮಾಡಿದೆ. ನೂತನ ಛೇರ್ಮನ್ ನೇಮಕವಾಗುವವರೆಗೂ ಇಷಾಥ್ ಹುಸೇನ್ ಆ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಟಾಟಾ ಗ್ರೂಪ್’ನ ಛೇರ್ಮನ್ ಆಗಿದ್ದ ಸೈರಸ್ ಮಿಸ್ತ್ರಿಯವರು ಟಿಸಿಎಸ್ ನಿರ್ದೇಶಕರ ಮಂಡಳಿಗೂ ಛೇರ್ಮನ್ ಆಗಿದ್ದರು. ಇದೀಗ ಟಾಟಾ ಗ್ರೂಪ್’ನಿಂದಲೇ ಮಿಸ್ತ್ರಿಯವರನ್ನು ಉಚ್ಛಾಟಿಸಿರುವ ಹಿನ್ನೆಲೆಯಲ್ಲಿ ಸಂಸ್ಥೆಗೆ ಹೊಸ ಛೇರ್ಮನ್’ನ ಹುಡುಕಾಟ ನಡೆಯುತ್ತಿದೆ.
ಯಾರು ಈ ಇಷಾತ್?
69 ವರ್ಷದ ಇಷಾತ್ ಹುಸೇನ್ ಇಂಗ್ಲೆಂಡ್’ನಲ್ಲಿ ಸಿಎ ಹಾಗೂ ಉನ್ನತ ಶಿಕ್ಷಣ ಪಡೆದಿದ್ದಾರೆ. 1983ರಲ್ಲಿ ಟಾಟಾ ಗ್ರೂಪ್ ಜೊತೆ ಸಂಪರ್ಕ ಹೊಂದಿದ ಇಷಾತ್, 1989ರಲ್ಲಿ ಟಾಟಾ ಸ್ಟೀಲ್’ನಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಅಲ್ಲಿಂದಾಚೆ ಟಾಟಾ ಗ್ರೂಪ್’ನ ವಿವಿಧ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದಾರೆ.

Comments are closed.