ಮನೋರಂಜನೆ

ನಟಿ ಪ್ರತ್ಯೂಶಾ ಬ್ಯಾನರ್ಜಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ರಾಹುಲ್ ರಾಜ್

Pinterest LinkedIn Tumblr

pratyusha-banerjee-rahulಮುಂಬೈ: ಆತ್ಮಹತ್ಯೆಗೆ ಶರಣಾದ ಬಾಲಿಕಾ ವಧು ಖ್ಯಾತಿಯ ನಟಿ ಪ್ರತ್ಯೂಶಾ ಬ್ಯಾನರ್ಜಿ‌ಗೆ ಆಕೆಯ ಗೆಳೆಯ ರಾಹುಲ್ ರಾಜ್ ಒತ್ತಾಯಪೂರ್ವಕವಾಗಿ ವೇಶ್ಯಾವಾಟಿಕೆಗೆ ತಳ್ಳಲು ಪ್ರಯತ್ನಿಸಿದ್ದ ಎನ್ನುವ ವರದಿಗಳು ಬಾಲಿವುಡ್ ಚಿತ್ರರಂಗ, ಕಿರುತೆರೆ ವಲಯಗಳಲ್ಲಿ ಕೋಲಾಹಲ ಸೃಷ್ಟಿಸಿವೆ.

ಪ್ರತ್ಯೂಶಾ ಏಪ್ರಿಲ್ 1 ರಂದು ಆತ್ಮಹತ್ಯೆಗೆ ಶರಣಾಗುವ ಮುನ್ನ ತನ್ನ ಗೆಳೆಯ ರಾಹುಲ್ ರಾಜ್‌ನೊಂದಿಗೆ ನಡೆದ ಸಂಭಾಷಣೆ ಬಹಿರಂಗವಾಗಿದ್ದು ಅದರಲ್ಲಿನ ಸಾರಾಂಶ ಆಘಾತ ಮೂಡಿಸುವಂತಿದೆ.

ಪ್ರತ್ಯೂಶಾ ಮತ್ತು ರಾಹುಲ್ ನಡುವೆ ನಡೆಗ ಟೆಲಿಫೋನ್ ಮಾತುಕತೆಯ ವಿವರಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಆಕೆ ಆತ್ಮಹತ್ಯೆಗೆ ಶರಣಾಗುವ ಮುನ್ನ ನಡೆದ ಸಂಭಾಷಣೆಯಾಗಿದೆ ಎಂದು ಪ್ರತ್ಯೂಶಾ ಪೋಷಕರ ಪರ ವಕೀಲ ನೀರಜ್ ಗುಪ್ತಾ ತಿಳಿಸಿದ್ದಾರೆ.

ರಾಹುಲ್ ರಾಜ್ ನೀನೊಬ್ಬ ಕೆಟ್ಟ ವ್ಯಕ್ತಿ. ನನ್ನ ಜೀವನವನ್ನೇ ನಾಶ ಮಾಡಿದ್ದೀಯಾ? ನಾನು ಚಿತ್ರರಂಗಕ್ಕೆ ನನ್ನ ಮೈಮಾರಿಕೊಳ್ಳಲು ಬರಲಿಲ್ಲ. ನಾನು ನಟಿಸಲು. ಉದ್ಯೋಗಕ್ಕಾಗಿ ಬಂದಿದ್ದೆ. ಆದರೆ, ನೀನು ನನ್ನನ್ನು ವೇಶ್ಯಾವಾಟಿಕೆಗೆ ತಳ್ಳಲು ಪ್ರಯತ್ನಿಸುತ್ತಿದ್ದೀಯಾ. ನನಗೆ ನಿನ್ನ ಬಗ್ಗೆ ತುಂಬಾ ಬೇಸರವಾಗಿದೆ ಎಂದು ಪ್ರತ್ಯೂಶಾ ರಾಹುಲ್‌ಗೆ ಟೆಲಿಫೋನ್ ಸಂಭಾಷಣೆಯಲ್ಲಿ ಹೇಳಿದ್ದಾಳೆ.

ಉಭಯರ ನಡುವೆ ನಡೆದ ಸಂಭಾಷಣೆಯಲ್ಲಿ ರಾಹುಲ್, ಪ್ರತ್ಯೂಶಾಳನ್ನು ಒತ್ತಾಯಪೂರ್ವಕವಾಗಿ ವೇಶ್ಯಾವಾಟಿಕೆಗೆ ತಳ್ಳಲು ಪ್ರಯತ್ನಿಸಿದ್ದ ಎನ್ನುವುದು ಸ್ಪಷ್ಟವಾಗಿದೆ. ನಂತರ ಫೋನ್ ಮಾಡಿದಾಗ ಕೂಡಾ ಪ್ರತ್ಯೂಶಾ ವೇಶ್ಯಾವಾಟಿಕೆಯ ಶಬ್ದ ಬಳಸಿದ್ದಳು ಎನ್ನಲಾಗಿದೆ.

ಪ್ರತ್ಯೂಶಾ ಬ್ಯಾನರ್ಜಿಯ ಸುದ್ದಿ ಚಿತ್ರರಂಗವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಬಾಲಿಕಾ ವಧು ಕಿರುತೆರೆ ಧಾರವಾಹಿಯಲ್ಲಿ ನಡೆಸಿ ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಸೃಷ್ಟಿಸಿದ್ದ ಪ್ರತ್ಯೂಶಾಗೆ ತಾನೇ ನಂಬಿದ ಗೆಳೆಯ ಕೈಕೊಟ್ಟಾಗ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Comments are closed.