ಮನೋರಂಜನೆ

43ನೇ ಹರೆಯಕ್ಕೆ ಕಾಲಿಟ್ಟ ಐಶ್ವರ್ಯಾ ರೈ

Pinterest LinkedIn Tumblr
Actress Aishwarya Rai Bachchan gestures on the red carpet of the Bollywood Zee Cine Awards at the Marina Bay Sands in Singapore January 14, 2011. REUTERS/Vivek Prakash (SINGAPORE - Tags: ENTERTAINMENT PROFILE)
Aishwarya 

ಮುಂಬೈ: ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಅವರು 43ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಕುಟುಂಬ ಮತ್ತು ಆಪ್ತ ಸ್ನೇಹಿತರೊಂದಿಗೆ ಮಂಗಳವಾರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಐಶ್ವರ್ಯಾ ರೈ, ರಣಬೀರ್‌ ಕಪೂರ್‌, ಅನುಷ್ಕಾ ಶರ್ಮಾ ಅಭಿನಯದ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು ಅದ್ದೂರಿಯಾಗಿ ತೆರೆ ಕಾಣುತ್ತಿದೆ.

ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರು ‘ಇರುವರ್‌’ ಚಿತ್ರದ ಮೂಲಕ 1997ರಲ್ಲಿ ಐಶ್ವರ್ಯಾ ರೈ ಭಾರತೀಯ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಅದೇ ವರ್ಷ ಖ್ಯಾತ ಬಹುಭಾಷಾ ನಟ ಮೋಹನ್‌ ಲಾಲ್‌ ಅವರೊಂದಿಗೆ ‘ಔರ್‌ ಪ್ಯಾರ್‌ ಹೊ ಗಯಾ’ ಚಿತ್ರ ಐಶ್ವರ್ಯಾ ರೈ ನಟನೆಯ ಮೊದಲ ಹಿಂದಿ ಚಿತ್ರವಾಗಿದೆ.

‘ಹಮ್‌ ದಿಲ್‌ ದೇ ಚುಕೇ ಸನಮ್‌’, ‘ದೇವದಾಸ್‌’, ‘ಚೋಖರ್‌ ಬಲಿ’, ‘ರೈನ್‌ಕೋಟ್‌’, ‘ಮೊಹಬ್ಬಾತೇ’, ‘ಧೂಮ್‌–2’, ‘ಜೋಧಾ ಅಕ್ಬರ್‌’ ಮೊದಲಾದ ಹಿಂದಿ ಚಿತ್ರಗಳಲ್ಲಿ ಐಶ್ವರ್ಯಾ ರೈ ನಟಿಸಿದ್ದಾರೆ.

2007ರಲ್ಲಿ ನಟ ಅಭಿಷೇಕ್‌ ಬಚ್ಚನ್‌ ಅವರೊಂದಿಗೆ ವಿವಾಹವಾದ ಐಶ್ವರ್ಯಾ ರೈ ಅವರಿಗೆ 5 ವರ್ಷದ ಆರಾಧ್ಯ ಬಚ್ಚನ್‌ ಎಂಬ ಹೆಣ್ಣು ಮಗಳಿದ್ದಾಳೆ.

ಕೆಲ ಕಾಲ ಚಿತ್ರರಂಗದಿಂದ ದೂರ ಉಳಿದಿದ ಐಶ್ವರ್ಯಾ, ‘ಜಬ್ಬಾ’ ಮತ್ತು ‘ಸರ್ಬಜಿತ್‌’ ಚಿತ್ರಗಳ ಮೂಲಕ ಮತ್ತೆ ಚಿತ್ರರಂಗಕ್ಕೆ ಹಿಂದಿರುಗಿದರು.
ಪ್ರಸುತ್ತ ಕರಣ್ ಜೋಹರ್‌ ನಿರ್ದೇಶನದ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸಿದ್ದಾರೆ.

Comments are closed.