ಜಮ್ಮು: ಜಮ್ಮು–ಕಾಶ್ಮೀರದ ಸಾಂಬಾ, ರಜೋರಿ ಹಾಗೂ ಜಮ್ಮು ಜಿಲ್ಲೆ ವ್ಯಾಪ್ತಿಯ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆ ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು, ಐದು ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ. ಎಂಟು ಮಂದಿ ಗಾಯಗೊಂಡಿದ್ದಾರೆ.
ಸಾಂಬಾ ಜಿಲ್ಲೆಯ ರಾಮ್‌ಗರ್ ವಲಯದಲ್ಲಿ ಇಬ್ಬರು ಅಪ್ರಾಪ್ತರು ಹಾಗೂ ಮೂವರು ಮಹಿಳೆಯರು ಸಾವಿಗೀಡಾಗಿದ್ದಾರೆ.
ಪಾಕ್ ಸೇನೆಯು ಜಮ್ಮು ಮತ್ತು ಸಾಂಬಾ ಜಿಲ್ಲೆಯ ರಾಮ್‌ಗರ್ ಮತ್ತು ಅರ್ನಿ ಪ್ರದೇಶದಲ್ಲಿ ಬೆಳಿಗ್ಗೆ 6.30ಕ್ಕೆ ಗುಂಡಿನ ದಾಳಿ ಆರಂಭಿಸಿದೆ. ಬಳಿಕ, ಐದು ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಬಿಎಸ್‌ಎಫ್(ಜಿ)ನ ಡಿಐಜಿ ಧರ್ಮೇಂದ್ರ ಪರೇಕ್ ಮಂಗಳವಾರ ತಿಳಿಸಿದ್ದಾರೆ.
ಸೋಮವಾರದಿಂದ ನಡೆಸಿದ ದಾಳಿಯಲ್ಲಿ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.