ಮನೋರಂಜನೆ

ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದ ಗಾಯಕಿ ಚೈತ್ರಾ; ಪ್ರಥಮ್ ಸೇರಿದಂತೆ 6 ಮಂದಿ ಸೇಫ್

Pinterest LinkedIn Tumblr

chaitra1

ಬಿಗ್‌ಬಾಸ್‌ ಮನೆಯಲ್ಲಿ ಅತ್ಯಂತ ಕಳಪೆಯ ಆಟ ಆಡುತ್ತಿದ್ದ ಚೈತ್ರಾ ಎಲ್ಲರ ನಿರೀಕ್ಷೆಯಂತೆ ಮನೆಯಿಂದ ಹೊರಬಿದ್ದಿದ್ದಾಳೆ. ಈ ಬಾರಿ ಒತ್ತೆ 7 ಮಂದಿ ನಾಮಿನೇಟ್ ಆಗಿದ್ದು, ಅದರಲ್ಲಿ ಚೈತ್ರಾ ಶನಿವಾರ ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದಿದ್ದಾರೆ.

chaitra

ಶನಿವಾರ ಬಂದರೆ ಸಾಕು ಯಾರು ಹೊರ ಹೋಗ್ತಾರೆ ಅನ್ನೋ ಚರ್ಚೆ ಶುರುವಾಗುತ್ತೆ. ಆದರೆ ಬಹುತೇಕ ಮಂದಿಗೆ ಚೈತ್ರ ಹೊರಹೋಗುದು ಗ್ಯಾರಂಟಿ ಆಗಿತ್ತು. ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಪ್ರಥಮ್, ಮಾಳವಿಕಾ, ಮೋಹನ್, ಸಂಜನಾ, ಓಂಪ್ರಕಾಶ್, ಚೈತ್ರಾ, ಕೀರ್ತಿ ನಾಮಿನೇಟ್ ಆಗಿದ್ದರು. ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಲೇ ಬಂದಿರುವ ಪ್ರಥಮ್ಈ ವಾರವೂ ಸೇಫ್ಆಗಿದ್ದಾರೆ. ಯಾಕಂದ್ರೆ ಬಿಗ್ಬಾಸ್ಮನೆಯಲ್ಲಿ ಅವರೊಬ್ಬ ಸ್ಟ್ರಾಂಗ್ಕಂಟೆಸ್ಟಂಟ್. ಇನ್ನು ಮಾಳವಿಕಾ ಸಹ ಒಬ್ಬ ಸ್ಟ್ರಾಂಗ್ಸ್ಪರ್ಧಿಯಾಗಿದ್ದು, ಮೋಹನ್, ಸಂಜನಾ ಮತ್ತು ಓಂಪ್ರಕಾಶ್ ಬಿಗ್‌ಬಾಸ್‌ ಮನೆಯಲ್ಲಿ ತಮ್ಮ ಇರುವಿಕೆಯನ್ನ ಗುರುತಿಸಿಕೊಂಡಿದ್ದಾರೆ.

pratham

ಈ ಏಳು ಜನರಲ್ಲಿ ಗಾಯಕಿ ಚೈತ್ರಾ ಅಷ್ಟೊಂದು ಸ್ಟ್ರಾಂಗ್ಸ್ಪರ್ಧಿ ಅಲ್ಲ ಎನ್ನುವುದು ಕೆಲವರ ಅಭಿಮತವಾಗಿತ್ತು. ಜೊತೆಗೆ ಬಿಗ್ಬಾಸ್ನ ಯಾವುದೇ ಟಾಸ್ಕ್ಗಳಲ್ಲಿ ಚೈತ್ರಾ ಅಷ್ಟಾಗಿ ತಮ್ಮನ್ನ ತೊಡಗಿಸಿಕೊಳ್ಳುತ್ತಿರಲಿಲ್ಲ. ಜೊತೆಗೆ ಯಾರೊಂದಿಗೂ ಸರೋಯಾಗಿ ಬೆರೆಯುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಎಲಿಮಿನೇಟ್ಆಗಿದ್ದರೆ. ರವಿವಾರ ಅವರು ಸುದೀಪ್ ಅವರೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.

Comments are closed.