ಮಂಡ್ಯ(ಅ.29): ಪಟ್ಟಣದಲ್ಲಿ ಮಾಜಿ ಸಂಸದೆ ರಮ್ಯಾ ಮನೆ ಮಾಡಿದ್ದಾರೆ. ಆದರೆ ಈ ಮನೆಯಲ್ಲಿ ರಮ್ಯಾಳ ಸುಳಿವು ಕಾಣ್ತಿಲ್ಲ. ಮನೆಯ ಮುಂದೆ ಮೂರ್ನಾಲ್ಕು ಜನ ಸೆಕ್ಯುರಿಟಿ ಸಿಬ್ಬಂದಿಗಳನ್ನು ಹಾಕಿ ಮನೆಯ ಸುತ್ತಲೂ ಸಿ.ಸಿ.ಟಿವಿ ಹಾಕಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಜನರ ಕೈಗೆ ಸುಲಭವಾಗಿ ಸಿಗಲು ಬಸ್ ಸ್ಟಾಂಡ್ ಸನಿಹದಲ್ಲಿ ಮನೆ ಮಾಡೋದಾಗಿ ರಮ್ಯಾ ಅದರಂತೆ ಬಸ್ ಸ್ಟಾಂಡ್’ಗೆ ಸನಿಹವೇ ಇರೋ ವಿದ್ಯಾನಗರದ ಬಳಿಯ ವಿ.ವಿ.ಸ್ಟೇಡಿಯಂ ಎದುರು ಮನೆ ಮಾಡಿದ್ದಾರೆ. ಆದರೆ ಈ ಮನೆಯಲ್ಲಿ ಅವರು ಯಾರ ಕೈಗೂ ಸಿಗುತ್ತಿಲ್ಲ. ಮನೆಯ ಗೃಹ ಪ್ರವೇಶದ ವಿಷಯವನ್ನು ಯಾರಿಗೂ ತಿಳಿಸದೆ ರಹಸ್ಯವಾಗಿ ಮಾಡಿರೋ ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ಮನೆ ಮಾಡಿದ್ದು ಯಾಕೆ ಅನ್ನೋದು ಸ್ಥಳೀಯ ಸಾರ್ವಜನಿಕರಿಗೆ ಯಕ್ಷ ಪ್ರಶ್ನೆಯಾಗಿದೆ. ಅಲ್ಲದೆ ಸ್ಥಳೀಯ ಜನರ ನಡುವೆಯಿದ್ದು ಕೆಲಸ ಮಾಡುವುದಾಗಿ ಹೇಳಿದ್ದ ರಮ್ಯಾ ಮನೆಗೆ ಇಷ್ಟೊಂದು ಸೆಕ್ಯೂರಿಟಿ ಇಟ್ಕೋಂಡ್ ಹೇಗೆ ಕೆಲಸ ಮಾಡ್ತಾರೆ? ಅಲ್ಲದೆ ಜನ ಸಾಮಾನ್ಯರ ಕೈಗೆ ಹೇಗೆ ಸಿಗ್ತಾರೆ ಅನ್ನೋ ಬಗ್ಗೆ ಸ್ಥಳೀಯರು ಆರೋಪ ಮಾಡಿದ್ದು,ರಮ್ಯರವರ ನಡೆ ಏನೆಬುಂದನ್ನು ರಮ್ಯಾ ರವರು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.