ಸ್ತನ ಕ್ಯಾನ್ಸರ್ ಜಾಗೃತಿ ಆಂದೋಲನದಲ್ಲಿ ಮಾದಕ ನಟಿ ಸನ್ನಿ ಲಿಯೋನ್ ಒಂದು ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದಾಳೆ ಎಂದು ಮೂಲಗಳು ಶನಿವಾರದಂದು ತಿಳಿಸಿದ್ದಾರೆ.
ಔರ್ ದಿಖಾವೋ ಡಿಜಿಟಲ್ ಚಾನೆಲ್ನಿಂದ ಕೈಗೊಳ್ಳಲಾಗಿರುವ ಸ್ತನ ಕ್ಯಾನ್ಸರ್ ಜಾಗೃತಿ ಆಂದೋಲನದಲ್ಲಿ ಬಾಲಿವುಡ್ನ ಮಾದಕ ನಟಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದು, ಸ್ತನ ಕ್ಯಾನ್ಸರ್ನನ್ನು ಪತ್ತೆ ಮಾಡಿ ಅದನ್ನು ನಿರ್ಮೂಲನೆಗೊಳಿಸಿ ಎಂಬ ಸಂದೇಶವನ್ನೂ ಸಾರಿದ್ದಾಳೆ. ಮಹಿಳೆಯರು ಸಂಕೋಚಪಡಬಾರದು.
ವನಿತೆಯರು ತಮ್ಮ ಸ್ತನಗಳ ಬಗ್ಗೆ ತುಂಬಾ ಗಮನಹರಿಸಬೇಕು. ಹಾಗೆ ಮಾಡುವುದರಿಂದ ಸ್ತನ ಕ್ಯಾನ್ಸರ್ನ ಅರ್ಧದಷ್ಟು ಪ್ರಕರಣಗಳನ್ನು ಕಡಿಮೆ ಮಾಡಬಹುದು. ನಾಚಿಕೆಪಟ್ಟುಕೊಳ್ಳಬೇಡಿ, ಸಂಕೋಚ ಬೇಡ. ಎರಡು ನಿಮಿಷ ಕಾಲ ನಿಮ್ಮ ಸ್ತನವನ್ನು ಪರೀಕ್ಷೆ ಮಾಡಿಕೊಂಡರೆ ನಿಮ್ಮ ಜೀವ-ಜೀವನವನ್ನು ರಕ್ಷಿಸಬಹುದು ಎಂದು ಸನ್ನಿ ಬ್ರೆಸ್ಟ್ ಕ್ಯಾನ್ಸರ್ ನಿರ್ಮೂಲನೆ ಸಂದೇಶ ನೀಡಿದ್ದಾಳೆ.ಈ ವಿಡಿಯೋ ಬಾಲಿವುಡ್ ಬೆಡಗಿಯರಾದ ತಾಪ್ಸಿ ಪನ್ನು, ಶಿಬಾನಿ ದಾಂಡೇಕರ್, ಸಾನಿಯಾ ಎನ್ಸಿ ಮೊದಲಾದವರ ಸಂದೇಶಗಳೂ ಇದರಲ್ಲಿದೆ ಎಂದು ತಿಳಿದು ಬಂದಿದೆ.
Comments are closed.