ಮುಂಬೈ: ಇತ್ತೀಚೆಗೆ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಚಿತ್ರ ಯೆ ದಿಲ್ ಹೆ ಮುಷ್ಕಿಲ್ ನಲ್ಲಿ ರಣಬೀರ್ ಕಪೂರ್ ಮತ್ತು ಐಶ್ವರ್ಯಾ ರೈ ಬಚ್ಚನ್ ನಡುವಿನ ರೋಮ್ಯಾಂಟಿಕ್ ದೃಶ್ಯಗಳು ಭಾರೀ ಸದ್ದು ಮಾಡುತ್ತಿರುವುದು ಸುಳ್ಳಲ್ಲ.
ಚಿತ್ರದಲ್ಲಿನ ಹಸಿಬಿಸಿ ದೃಶ್ಯಗಳ ಕುರಿತು ಬಚ್ಚನ್ ಪರಿವಾರ ಅಸಮಾಧಾನ ಹೊಂದಿದೆ ಎಂದು ಹೇಳಲಾಗುತ್ತಿದ್ದರೆ, ಇನ್ನೊಂದೆಡೆ ಚಿತ್ರದ ನಾಯಕ ರಣಬೀರ್ ಕಪೂರ್ ನನ್ನು ಐಶ್ವರ್ಯಾ ರೈ ಮಗಳು ಆರಾಧ್ಯಾ ಡ್ಯಾಡಿ ಎಂದು ಕರೆದಿದ್ದಳಂತೆ. ಈ ವಿಚಾರವನ್ನು ಸ್ವತಃ ಐಶ್ವರ್ಯಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಒಮ್ಮೆ ರಣಬೀರ್ ಅಭಿಷೇಕ್ ರಂತೆಯೇ ಕಪ್ಪು ಬಣ್ಣದ ಜಾಕೆಟ್ ಮತ್ತು ಕ್ಯಾಪ್ ಧರಿಸಿದ್ದರು. ಅವರನ್ನು ಹಿಂದಿನಿಂದ ನೋಡಿದ ಕೂಡಲೇ ಅಪ್ಪ ಎಂದು ತಿಳಿದು ಓಡಿ ಹೋಗಿ ಆರಾಧ್ಯ ಡ್ಯಾಡಿ ಎಂದು ಅಪ್ಪಿಕೊಂಡಿದ್ದಳಂತೆ ಎಂದು ಹೇಳಿಕೊಂಡಿದ್ದಾರೆ.
ರಣಬೀರ್ ಕಪೂರ್ ಅವರನ್ನು ಇಷ್ಟಪಡುವ ಆರಾಧ್ಯ ರಣಬೀರ್ ಅಂಕಲ್ ಎಂದು ಕರೆಯುವ ಬದಲು ಆರ್ ಕೆ ಎಂದು ಕರೆಯುತ್ತಾಳಂತೆ. ಅವರ ತಮಾಷಾ ಚಿತ್ರದ ಮಟರ್ಗಷ್ಟಿ ಹಾಡಿಗೆ ಹೆಜ್ಜೆ ಹಾಕುತ್ತಾಳಂತೆ. ಇದನ್ನು ಕೂಡ ತಾಯಿ ಐಶ್ವರ್ಯಾ ಹೇಳಿದ್ದಾರೆ.
42 ರ ಹರೆಯದ ಐಶ್ವರ್ಯಾ 34 ಹರೆಯದ ರಣಬೀರ್ ನಡುವಿನ ದೃಶ್ಯಗಳು ಈಗಾಗಲೇ ಭಾರೀ ಸದ್ದು ಮಾಡಿದ್ದು, ಕೆಲ ವಿಪರೀತ ಎನಿಸುವಂತಹ ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಲಾಗಿದೆ ಎಂದು ತಿಳಿದು ಬಂದಿದೆ.
ಮನೋರಂಜನೆ
Comments are closed.