ಅಂತರಾಷ್ಟ್ರೀಯ

ಮಕ್ಕಳ ಕೈಗೆ ಸ್ಮಾರ್ಟ್ ಫೋನ್ ಕೊಡಬೇಡಿ

Pinterest LinkedIn Tumblr

smart-phoneಮಕ್ಕಳನ್ನು ಸುಮ್ಮನಾಗಿಸಲು ಪೋಷಕರು ಅವರ ಕೈಗೆ ಸ್ಮಾರ್ಟ್ ಫೋನ್ ಗಳನ್ನು ಕೊಡುವುದನ್ನು ನಿಲ್ಲಿಸಿ, ಇಲ್ಲದಿದ್ದರೆ ಮುಂದೆ ಮಕ್ಕಳು ಗಂಭೀರ ಸಮಸ್ಯೆಗಳಿಂದ ಬಳಲುತ್ತಾರೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಗಲಾಟೆ ಮಾಡುತ್ತಾ ಓಡಾಡಿಕೊಂಡು ತಿರುಗುವ ಮಕ್ಕಳನ್ನು ಸುಮ್ಮನಾಗಿಸಲು ಪೋಷಕರು ಅವರ ಕೈಗೆ ಸ್ಮಾರ್ಟ್ ಫೋನ್ ಗಳನ್ನು ನೀಡುತ್ತೀರಾ ಅದು ಸರಿ ಆದರೆ ಅವರ ಸ್ಮಾರ್ಟ್ ಫೋನ್ ಗಳ ಬಳಸುವುದರಿಂದ ಮಕ್ಕಳಲ್ಲಿ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ಕಳೆದುಕೊಳ್ಳಲಿದ್ದಾರೆ ಎಂದು ಅಮೆರಿಕದ ಪ್ರಖ್ಯಾತ ಮಕ್ಕಳ ಆಸ್ಪತ್ರೆ ಸಿಎಸ್ ಮೋಟ್ ವಿಶ್ವವಿದ್ಯಾಲಯದ ಪ್ರಮುಖ ಲೇಖಕರಾದ ಜೆನ್ನಿ ರಡೇಸ್ಕಿ ಹೇಳಿದ್ದಾರೆ.
ಇತ್ತೀಚಿನ ಮಕ್ಕಳ ಬಾಲ್ಯದಲ್ಲಿ ಡಿಜಿಟೆಲ್ ಮಿಡಿಯಾ ಹಾಸುಹೊಕ್ಕಾಗಿದೆ. ತಮ್ಮ ಮಕ್ಕಳು ಸ್ಮಾರ್ಟ್ ಫೋನ್ ಬಳಸೋದನ್ನು ಕಲಿತಿದೆ. ಟಿವಿ ರಿಮೋಟ್ ಹಿಡಿದು ಚಾನೆಲ್ ಬದಲಾಯಿಸುತ್ತೆ ಗೊತ್ತಾ ಅಂತಾ ಹೆಮ್ಮೆಯಿಂದ ಪಾಲಕರು ಹೇಳಿಕೊಳ್ಳುತ್ತಾರೆ ಆದ್ರೆ ಸ್ಮಾರ್ಟ್ ಫೋನ್ ಆಪರೇಟ್ ಮಾಡುವ ನಿಮ್ಮ ಮಗು ವೇಗವಾಗಿ ಬೆಳೆಯುತ್ತಿದೆ ಎಂದು ಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಮಗುವಿನ ಆರೋಗ್ಯದ ಮೇಲೆ ಸ್ಮಾರ್ಟ್ ಫೋನ್ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಮಕ್ಕಳಿಗೆ ಸರಿಯಾದ ಸಮಯಕ್ಕೆ ಆಟ-ಪಾಠ, ನಿದ್ದೆ ಮಾಡಿದರೆ ಅವರ ಬೌದ್ಧಿಕ ಶಕ್ತಿ ಬೆಳವಣಿಗೆಯಾಗುತ್ತದೆ ಎಂಬ ಅರಿವು ಸದ್ಯ ನಮಗಿದೆ. ಆದರೆ ಇತ್ತೀಚೆಗೆ ಮಕ್ಕಳು ಡಿಜಿಟೆಲ್ ಮಿಡಿಯಾಗಳಿಗೆ ಒಗ್ಗಿಕೊಳ್ಳುತ್ತಿರುವುದರಿಂದ ಅವರು ತಮ್ಮ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಎರಡರಿಂದ ಐದು ವರ್ಷದ ಮಕ್ಕಳಿಗೆ ದಿನದಲ್ಲಿ ಒಂದು ಗಂಟೆ ಮಾತ್ರ ಟಿವಿಯನ್ನು ವೀಕ್ಷಿಸಲು ಬಿಡಿ. ಅದನ್ನು ಬಿಟ್ಟು ಪೋಷಕರು ತಮ್ಮ ಜತೆಗೆ ಮಕ್ಕಳನ್ನು ದಿನಪೂರ್ತಿ ಟಿವಿ ವೀಕ್ಷಿಸಲು ಬಿಡುವುದು ಸರಿಯಲ್ಲ ಎಂದು ತಜ್ಞರು ಹೇಳಿದ್ದಾರೆ.

Comments are closed.