ಮನೋರಂಜನೆ

ತನ್ನ ಆಹಾರದ ಗುಟ್ಟನ್ನು ಬಿಚ್ಚಿಟ್ಟ ನಟಿ ಕತ್ರಿನಾ ಕೈಫ್‌…ಇದನ್ನು ನೀವು ಅಳವಡಿಸಿಕೊಂಡರೆ ಆರೋಗ್ಯ -ಸೌಂದರ‍್ಯವನ್ನು ಕಾಪಾಡಬಹುದು

Pinterest LinkedIn Tumblr

katrina

ನಿತ್ಯದ ಬೆಳಗನ್ನು ಸ್ವಾಗತಿಸುವುದೇ ನೀರಿನ ಮೂಲಕ. ಎರಡ್ಮೂರು ಗ್ಲಾಸ್‌ನೀರು ಕುಡಿಯುವ ಮೂಲಕ ಆರಂಭಿಸುತ್ತೇನೆ.ಯಥೇಚ್ಛವಾಗಿ ನೀರು ಕುಡಿಯುವುದರಿಂದ ಆರೋಗ್ಯಯುತ ಜೀವನಶೈಲಿಯನ್ನು ಕಾಪಾಡಿಕೊಳ್ಳಬಹುದು. ದೇಹ ಸೇರಿದ ನೀರು ವಿಷ ಪದಾರ್ಥವನ್ನು ಹೊರ ಹಾಕುತ್ತದೆ. ಇದರಿಂದ ಆರೋಗ್ಯ ಹಾಗೂ ಸೌಂದರ‍್ಯ ಕೂಡ ಹೆಚ್ಚುತ್ತದೆ ಎನ್ನುತ್ತಾರೆ ಬಾಲಿವುಡ್‌ನಟಿ ಕತ್ರಿನಾ ಕೈಫ್‌.

ಸಮರ್ಪಕ ವಿಧಾನದ ವರ್ಕೌಟ್‌ಮಾಡುತ್ತೇನೆ. ಡಯಟ್‌ವಿಷಯದಲ್ಲಿ ನಾನು ತುಂಬ ಸ್ಟ್ರಿಕ್ಸ್‌ಏನಿಲ್ಲ. ಕರಿದ ತಿನಿಸುಗಳನ್ನು ತಿನ್ನುವುದಿಲ್ಲ. ಸಕ್ಕರೆಯಂಶವನ್ನು ಕೂಡ ಅವೈಡ್‌ಮಾಡುತ್ತೇನೆ. ಅದನ್ನು ಬಿಟ್ಟರೆ ಹೊರಗಡೆ ಹೋದಾಗ ಖಂಡಿತವಾಗಲೂ ನನಗೇನು ಬೇಕೋ ಅದನ್ನೇ ತಿನ್ನುತ್ತೇನೆ ಎಂದು ತನ್ನ ಆಹಾರದ ಬಗ್ಗೆ ಹೇಳಿಕೊಂಡಿದ್ದಾರೆ.

Comments are closed.