ಮನೋರಂಜನೆ

ನಟಿ ರಾಧಿಕಾ ಆಪ್ಟೆ ಕನ್ನಡ ಚೆನ್ನಾಗಿ ಮಾತನಾಡುತ್ತಾರಂತೆ !

Pinterest LinkedIn Tumblr

radhika-apte

ಬೆಂಗಳೂರು: ಟಾಲಿವುಡ್ನ ಜನಪ್ರಿಯ ನಟಿ ರಾಧಿಕಾ ಆಪ್ಟೆ ಕನ್ನಡ ಚೆನ್ನಾಗಿ ಮಾತನಾಡುತ್ತಾರಂತೆ. ಹಾಗಂತ ಸ್ವತಃ ಕಬಾಲಿ ನಟಿ ಹೇಳಿಕೊಂಡಿದ್ದಾರೆ.

ಹೌದು, ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದಾಗ ಓರ್ವ ಪತ್ರಕರ್ತ ರಾಧಿಕಾಳಿಗೆ ಸ್ಯಾಂಡಲ್ವುಡ್ ಚಿತ್ರಗಳಲ್ಲಿ ಅಭಿನಯಿಸುವ ಯೋಜನೆಯಿದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ನಟಿ ಸಧ್ಯ ನನ್ನ ಮುಂದೆ ಯಾವುದೇ ಆಫರ್ಗಳು ಬಂದಿಲ್ಲ. ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಆದರೆ ನನಗೆ ಕನ್ನಡ ಚೆನ್ನಾಗಿ ಬರುತ್ತದೆ ಎಂದು ಕನ್ನಡದಲ್ಲಿಯೇ ಹೇಳಿದರು.

ಯಾವುದೇ ಚಿತ್ರದಲ್ಲಿ ವ್ಯಕ್ತಿ ಸಿನಿಮಾಕ್ಕಿಂತ ದೊಡ್ಡವನಾಗಲಾರ. ಭಾರತೀಯ ಚಿತ್ರರಂಗ ವಿಶಾಲವಾದದ್ದು ಎಂದು ತಿಳಿಸಿದರು.

Comments are closed.