ಅಂತರಾಷ್ಟ್ರೀಯ

ನಾನು ಹಿಂದು ಸಮುದಾಯದ ಬಹುದೊಡ್ಡ ಅಭಿಮಾನಿ: ಅಭ್ಯರ್ಥಿ ಡೊನಾಲ್ಡ್ ಟ್ರಂಪ್

Pinterest LinkedIn Tumblr

donald-trump

ನ್ಯೂಜೆರ್ಸಿ: ನಾನು ಹಿಂದು ಸಮುದಾಯದ ಬಹುದೊಡ್ಡ ಅಭಿಮಾನಿಯಾಗಿದ್ದು, ಮುಂಬರುವ ದಿನಗಳಲ್ಲಿ ಭಾರತ ಮತ್ತು ಅಮೆರಿಕ ವಿಶ್ವದಲ್ಲಿಯೇ ಬೆಸ್ಟ್ ಫ್ರೆಂಡ್ ಆಗಲಿವೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಿಳಿಸಿದರು.

ಅನಿವಾಸಿ ಭಾರತೀಯರು ಹಮ್ಮಿಕೊಂಡಿದ್ದ ರಿಪಬ್ಲಿಕನ್ ಅಭಿಯಾನದಲ್ಲಿ ಟ್ರಂಪ್ ಮಾತನಾಡಿ, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಯಶಸ್ವಿಯಾಗಿ ಸಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ವ್ಯಾಪಾರ ವ್ಯವಹಾರ ವಿಸ್ತರಿಸಿದೆ. ಇಂತಹ ದೇಶದೊಂದಿಗೆ ನಾವು ಸದಾ ಕೈ ಜೋಡಿಸಲು ಉತ್ಸುಕರಾಗಿದ್ದು, ಮುಂದಿನ ದಿನಗಳಲ್ಲಿ ಅಮೆರಿಕ ಮತ್ತು ಭಾರತ ವಿಶ್ವದಲ್ಲಿಯೇ ಉತ್ತಮ ಗೆಳೆಯರು ಎನ್ನುವುದನ್ನು ಸಾಬೀತು ಮಾಡಲಾಗುವುದು ಎಂದು ಟ್ರಂಪ್ ಭವಿಷ್ಯ ನುಡಿದರು.

ಮೋದಿ ಅವರು ಉತ್ತಮ ನಾಯಕ. ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಲು ತುಂಭಾ ಉತ್ಸುಕನಾಗಿರುವೆ. ಮೋದಿ ಅವರು ಅಧಿಕಾರವಹಿಸಿಕೊಂಡಾಗಿನಿಂದ ಭಾರತದಲ್ಲಿ ಆರ್ಥಿಕ ಸುಧಾರಣೆ ಮತ್ತು ಆಡಳಿತಾತ್ಮಕ ಸುಧಾರಣೆ ಕಂಡಿದೆ. ಇದೇ ರೀತಿ ಆಡಳಿತಕ್ಕೆ ಚುರುಕು ಮುಟ್ಟಿಸುವುದು ನಮ್ಮ ಉದ್ದೇಶ. ನಾನು ಚುನಾವಣೆಯಲ್ಲಿ ಜಯಿಸಿದರೆ ವೈಟ್ ಹೌಸ್ನಲ್ಲಿ ಹಿಂದು ಸ್ನೇಹಿತರ ಸಂಖ್ಯೆ ಅಧಿಕವಾಗಲಿದೆ ಎಂದು ಹೇಳಿದರು.

ಇನ್ನು ಭಯೋತ್ಪಾದನೆ ವಿರುದ್ಧ ಭಾರತ ಕೈಗೊಒಂಡ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಉಗ್ರರನ್ನು ಸದೆಬಡಿಯಲು ನೆರವು ನೀಡುವುದಾಗಿ ಘೊಷಿಸಿದರು. ಭಾರತದಲ್ಲಿ ಮುಂಬೈ ನನ್ನ ಅಚ್ಚುಮೆಚ್ಚಿನ ನಗರವಾಗಿದೆ ಎಂದು ತಿಳಿಸಿದರು.

Comments are closed.