ಮನೋರಂಜನೆ

ಕಂಗನಾ ರಣಾವತ್‌ ಗೆ ಅಪಘಾತದಲ್ಲಿ ಗಾಯ

Pinterest LinkedIn Tumblr
kangana
kangana

ಮುಂಬೈ: ‘ಸಿಮ್ರಾನ್‌’ ಚಿತ್ರದ ಚಿತ್ರೀಕರಣಕ್ಕೆಂದು ಅಮೆರಿಕಕ್ಕೆ ತೆರಳಿರುವ ಬಾಲಿವುಡ್‌ ನಟಿ ಕಂಗನಾ ಅವರ ಕಾರು ಅಪಘಾತಕ್ಕೀಡಾದ ಘಟನೆ ಶನಿವಾರ ನಡೆದಿದೆ.

29 ವರ್ಷದ ನಟಿ ಕಂಗನಾ ‘ಸಿಮ್ರಾನ್‌’ ಚಿತ್ರದ ಚಿತ್ರೀಕರಣ ಮುಗಿಸಿ ಹೊಟೇಲ್‌ಗೆ ಹಿಂದಿರುಗುತ್ತಿದ್ದಾಗ ಅಟ್ಲಾಂಟಾದ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಕಂಗನಾ ಅವರಿಗೆ ಕಣ್ಣುಬ್ಬಿನ ಬಳಿ ಸಣ್ಣ ಗಾಯವಾಗಿದ್ದು, ಅತಂಕಪಡುವ ಅಗತ್ಯವಿಲ್ಲ ಶೀಘ್ರವೇ ಚಿತ್ರಕರಣಕ್ಕೆ ಮರಳಲ್ಲಿದ್ದಾರೆ ಎಂದು ಕಂಗನಾ ಅವರ ಆಪ್ತ ಮೂಲಗಳು ತಿಳಿಸಿವೆ. ‘ಸಿಮ್ರಾನ್‌’ ಚಿತ್ರವನ್ನು ಹನ್ಸಾಲ್‌ ಮೆಹ್ತಾ ನಿರ್ದೇಶಿಸುತ್ತಿದ್ದಾರೆ.

Comments are closed.