ಮನೋರಂಜನೆ

ಮಹಿಳಾ ಪ್ರಧಾನ ಚಿತ್ರ ‘ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ’

Pinterest LinkedIn Tumblr

burkhaತ್ರಿವಳಿ ತಲಾಖ್ ಹಾಗೂ ಏಕರೂಪ ನಾಗರಿಕ ಸಂಹಿತೆಯ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿದ್ದು, ಇದೇ ಸಮಯದಲ್ಲಿ ಬಿಡುಗಡೆಯಾಗಿರುವ ‘ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ’ ಸಿನಿಮಾ ಟ್ರೇಲರ್‌ ಪುರುಷ ಪ್ರಧಾನ ಮತ್ತು ಸಮಾಜದ ಮಡಿವಂತಿಕೆಯ ಕುರಿತು ಸಾಮಾಜಿಕ ತಾಣಗಳಲ್ಲಿ ಚರ್ಚಿಸುವಂತೆ ಮಾಡಿದೆ.

ಬೇರೆ ಬೇರೆ ವಯಸ್ಸಿನ ನಾಲ್ವರು ಮಹಿಳೆಯ ತುಡಿತ, ಭಾವನೆ, ಬದುಕು ಹಾಗೂ ಸಮಾಜದ ಕಟ್ಟುಪಾಡುಗಳನ್ನು ಬಿಡಿಸಿ ಬರುವ ಮನಸಿನ ಅನಾವರಣ ಚಿತ್ರದ ಕಥಾವಸ್ತು.

ಪ್ರಕಾಶ್‌ ಝಾ ನಿರ್ಮಾಣ, ಅಲಂಕೃತ ಶ್ರೀವಾಸ್ತವ ನಿರ್ದೇಶನದ ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ ಸಿನಿಮಾ ಅಕ್ಟೋಬರ್‌ 26ರಂದು ಮಾಮಿ(ಮುಂಬೈ ಅಕಾಡೆಮಿ ಆಫ್‌ ದಿ ಮೂವಿಂಗ್‌ ಇಮೇಜ್‌) ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಕೊಂಕಣಾ ಸೇನ್‌ ಶರ್ಮಾ, ರತ್ನಾ ಪಾಠಕ್‌ ಷಾ, ಆಹಾನಾ ಕುಮ್ರಾ ಹಾಗೂ ಪ್ಲಬಿತಾ ಬೋರ್ತಾಕುರ್‌ ಪ್ರಮುಖ ಪಾತ್ರವಹಿಸಿದ್ದಾರೆ.

Comments are closed.