ಮನೋರಂಜನೆ

‘ಬಿಗ್​ಬಾಸ್ 10’ಕ್ಕೆ ದೀಪಿಕಾ ಪಡುಕೋಣೆ ಚಾಲನೆ

Pinterest LinkedIn Tumblr

deepika-newಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಿಗ್ ಬಾಸ್ 10ನೇ ಆವೃತ್ತಿಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಶನಿವಾರ ಚಾಲನೆ ನೀಡಲಿದ್ದಾರೆ.
ಅಕ್ಟೋಬರ್ 16ರಿಂದ ಮೂಡಿಬರಲಿರುವ ವಿವಾದಾತ್ಮಕ ರಿಯಾಲಿಟಿ ಶೋ ವೇದಿಕೆ ಮೇಲೆ ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಜೊತೆ ಗುಳಿಕೆನ್ನೆ ಸುಂದರಿ ಕಾಣಿಸಿಕೊಳ್ಳಲಿದ್ದಾರೆ.
ಹಾಲಿವುಡ್ಗೆ ಹಾರಿರುವ ಕನ್ನಡತಿ ದೀಪಿಕಾ ಪಡುಕೋಣೆ ‘ತ್ರಿಬಲ್ ಎಕ್ಸ್: ದಿ ರಿಟರ್ನ್ ಆಫ್ ಗ್ಸಾಂಡರ್’ ಚಿತ್ರದ ಪ್ರಚಾರಕ್ಕಾಗಿ ಬಿಗ್ಬಾಸ್ ವೇದಿಕೆಗೆ ಆಗಮಿಸಲಿದ್ದಾರೆ ಎಂದು ವಾಹಿನಿಯ ಮುಖ್ಯಸ್ಥರಾದ ರಾಜ್ ನಾಯಕ್ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಬಿಗ್ಬಾಸ್ 10ನೇ ಆವೃತ್ತಿಯ ಕುರಿತು ಕಿರು ವಿಡಿಯೋ ತುಣುಕನ್ನು ಬಿಡುಗಡೆ ಮಾಡಲಾಗಿದ್ದು, ಭಾರತೀಯ ಸೆಲೆಬ್ರೆಟಿಗಳ ನಡುವೆ ಪೈಪೋಟಿ ನಡೆಯಲಿದೆ. ನಾನು ನೋಡಲು ತುಂಬಾ ಉತ್ಸುಕನಾಗಿರುವೆ. ಇದರ ಜತೆಗೆ ನೀವು ಥ್ರಿಲ್ಲಿಂಗ್ ಹಾಲಿವುಡ್ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು ಎಂದಿದ್ದಾರೆ.
ಈ ಸಲದ ಬಿಗ್ಬಾಸ್ನಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ, ಅವರ ಹಿನ್ನಲೆ ಏನು? ಯಾವರೀತಿ ಕಾಂಟ್ರವರ್ಸಿ ಸೃಷ್ಟಿಸಬಲ್ಲರು? ಎಂಬ ಪ್ರಶ್ನೆ ವೀಕ್ಷಕರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ.

Comments are closed.