ರಾಷ್ಟ್ರೀಯ

ಹೆಚ್ಚು ಕಾಲ ಸೆಕ್ಸ್ ಗೆ ನಿರಾಕರಣೆ ವಿಚ್ಛೇದನಕ್ಕೆ ಕಾರಣವಾಗಬಹುದು: ದಿಲ್ಲಿ ಹೈಕೋರ್ಟ್

Pinterest LinkedIn Tumblr

Delhi-High-Court-1ನವದೆಹಲಿ: ಸೂಕ್ತ ಕಾರಣವಿಲ್ಲದೆ ಹಲವು ದಿನಗಳ ಕಾಲ ಪತ್ನಿ ಪತಿಯನ್ನು ಲೈಂಗಿಕ ಸಂಪರ್ಕದಿಂದ ದೂರವಿಡುವುದರಿಂದ ಮಾನಸಿಕ ಕ್ರೌರ್ಯ ಹೆಚ್ಚಾಗಿ ವಿಚ್ಛೇದನಕ್ಕೆ ಕಾರಣವಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಬುಧವಾರ ಹೇಳಿದೆ.
ವ್ಯಕ್ತಿಯೊಬ್ಬ ತನ್ನ ಪತ್ನಿ ಕಳೆದ ನಾಲ್ಕುವರೆ ವರ್ಷಗಳಿಂದ ದೈಹಿಕ ಸಂಪರ್ಕಕ್ಕೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಅವಳಿಂದ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಆತನಿಗೆ ಪತ್ನಿಯಿಂದ ಮುಕ್ತಿ ನೀಡಿದೆ.
ಪತ್ನಿ ಯಾವುದೇ ದೈಹಿಕ ದೌರ್ಬಲ್ಯ ಹೊಂದಿರದಿದ್ದರೂ ಮತ್ತು ಇಬ್ಬರು ಒಟ್ಟಿಗೆ ವಾಸವಾಗಿದ್ದರೂ ಯಾವುದೇ ಸಕಾರಣವಿಲ್ಲದೆ ಸೆಕ್ಸ್ ಗೆ ನಿರಾಕರಿಸುತ್ತಿರುವುದರಿಂದ ಪತಿ ಮಾನಸಿಕವಾಗಿ ನೊಂದಿರುವುದನ್ನು ಪರಿಗಣಿಸಿ ವಿಚ್ಛೇದನಕ್ಕೆ ಅನುಮತಿ ನೀಡಿರುವುದಾಗಿ ನ್ಯಾಯಮೂರ್ತಿಗಳಾದ ಪ್ರದೀಪ್ ನಂದ್ರಜೋಗ್ ಮತ್ತು ಪ್ರತಿಭಾ ರಾಣಿ ಅವರು ಹೇಳಿದ್ದಾರೆ.
ವಿಚಾರಣೆ ವೇಳೆ ಪತಿಯ ಆರೋಪವನ್ನು ಪತ್ನಿ ಸ್ಪಷ್ಟವಾಗಿ ನಿರಾಕರಿಸದ ಹಿನ್ನೆಲೆಯಲ್ಲಿ ಕೋರ್ಟ್ ವಿಚ್ಛೇದನಕ್ಕೆ ಅನುಮತಿ ನೀಡಿದೆ.
ಮಾನಸಿಕ ಕ್ರೌರ್ಯತೆಯನ್ನು ಪರಿಗಣಿಸಿ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದ್ದ ವಿಚಾರಣಾ ಕೋರ್ಟ್ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹರಿಯಾಣದ ಈ ದಂಪತಿಗೆ ನವೆಂಬರ್ 26, 2001ರಲ್ಲಿ ಮದುವೆಯಾಗಿದ್ದು, ಇವರಿಗೆ 10 ವರ್ಷದ ಮತ್ತು 9 ವರ್ಷದ ಇಬ್ಬರು ಮಕ್ಕಳಿದ್ದಾರೆ. ಆದರೆ 2013ರಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು.

Comments are closed.