ಮನೋರಂಜನೆ

ಪಾಕ್ ಕಲಾವಿದರಿಗಿಂತ ದೇಶ ಮೊದಲು: ಪುನೀತ್‌ ರಾಜಕುಮಾರ್‌

Pinterest LinkedIn Tumblr

Punith-Rajkumarಕಲಬುರ್ಗಿ: ‘ನಾವೆಲ್ಲ ಮೊದಲು ಭಾರತೀಯರು ಆನಂತರ ಕಲಾವಿದರು. ಸ್ವಾಭಿಮಾನದ ವಿಷಯ ಬಂದಾಗ ನಾವು ಮೊದಲು ಭಾರತದ ಪರವಾಗಿ ನಿಲ್ಲಬೇಕಿದೆ, ನಿಲ್ಲುತ್ತೇವೆ. ಆನಂತರದಲ್ಲಿ ಪಾಕಿಸ್ತಾನದ ಕಲಾವಿದರ ಬಗ್ಗೆ ಮಾತನಾಡೋಣ’ ಎಂದು ನಟ ಪುನೀತ್‌ ರಾಜಕುಮಾರ್‌ ಹೇಳಿದರು.

‘ದೊಡ್ಮನೆ ಹುಡ್ಗ’ ಚಿತ್ರ ಪ್ರಚಾರಕ್ಕಾಗಿ ಬುಧವಾರ ಇಲ್ಲಿ ಭೇಟಿ ನೀಡಿದ ವೇಳೆ ಪಾಕಿಸ್ತಾನ ಕಲಾವಿದರ ನಿಷೇಧದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

ಕಲೆಗಿಂತ, ಜಗತ್ತಿನ ಇತರೆ ಕಲಾವಿದರ ಭಾವನೆಗಳಿಗಿಂತಲೂ ನಮ್ಮ ದೇಶ ದೊಡ್ಡದು. ಅದರ ಬಳಿಕ ಕಲಾವಿದ ಮತ್ತು ಕಲೆ ಹಾಗೂ ಸಂಸ್ಕೃತಿಯ ಮಾತು ಎಂದು ತಿಳಿಸಿದರು.

‘ಚಿತ್ರರಂಗದಲ್ಲಿ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಎನ್ನುವ ಬೇಧವಿಲ್ಲ, ಚಿತ್ರರಂಗದ ಹಿರಿಯರು ಸದಾಕಾಲ ಇಡೀ ಕರ್ನಾಟಕವನ್ನು ಒಂದಾಗಿ ನೋಡಿದ್ದಾರೆ. ಉತ್ತರ ಕರ್ನಾಟಕ ಯಾವತ್ತಿಗೂ ನಿರ್ಲಕ್ಷ್ಯ ಮಾಡುವುದಿಲ್ಲ, ಮಾಡುವ ಮಾತು ಬರವುದೇ ಇಲ್ಲ. ನಮ್ಮದು ಅಖಂಡ ಕರ್ನಾಟಕ. ಕಾವೇರಿ ವಿಚಾರದಲ್ಲೂ, ಕೃಷ್ಣೆಯ ವಿಚಾರದಲ್ಲೂ ಒಂದೇ. ನಮ್ಮ ದೊಡ್ಮನೆ ಹುಡ್ಗ ಚಿತ್ರಕ್ಕೆ ಉತ್ತರ ಕರ್ನಾಟಕದಲ್ಲಿ ಅಭೂತಪೂರ್ವ ಬೆಂಬಲ ದೊರಕಿದೆ. ಈ ವಿಷಯದಲ್ಲಿ ನಾನು ಅಭಿಮಾನಿಗಳನ್ನು ಅಭಿನಂದಿಸುತ್ತೇನೆ’ ಎಂದರು.

ರಾಯಚೂರು, ದೇವದುರ್ಗ, ಕಲಬುರ್ಗಿ ಭೇಟಿಯಾಗಿದೆ. ಬೀದರ್‌ಗೂ ಭೇಟಿ ಇದೆ. ಕಲಬುರ್ಗಿಗೆ ಇದು ಐದನೇ ಭೇಟಿ ಎಂದು ನೆನಪಿಸಿಕೊಂಡ ಪುನೀತ್, ಈ ಹಿಂದೆ ಅಪ್ಪಾಜಿ ಅವರೊಂದಿಗೆ ರಸಮಂಜರಿ ಕಾರ್ಯಕ್ರಮಕ್ಕಾಗಿ ಬಂದಿದ್ದನ್ನು ಸ್ಮರಿಸಿಕೊಂಡರು.

Comments are closed.