ಮನೋರಂಜನೆ

15 ಸ್ಪರ್ಧಿಗಳ ಈ ಬಿಗ್‍ಬಾಸ್ ಮನೆ ನಿರ್ಮಾಣ ವೆಚ್ಚ 1.3 ಕೋಟಿ ರೂ.

Pinterest LinkedIn Tumblr

bigಬೆಂಗಳೂರು: ಕನ್ನಡದ ಬಿಗ್‍ಬಾಸ್ ಸೀಸನ್ 4ಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಈ ಬಾರಿ ಬಿಗ್‍ಬಾಸ್ ಮನೆಗೆ ಹೋಗೋರು ಯಾರು ಎಂಬ ಬಗ್ಗೆ ತಿಂಗಳ ಹಿಂದಿನಿಂದಲೂ ಚರ್ಚೆ ಶುರುವಾಗಿತ್ತು. ಅಲ್ಲದೆ ತಿಥಿ ಚಿತ್ರದ ಗಡ್ಡಪ್ಪ ಖ್ಯಾತಿಯ ಚೆನ್ನೇಗೌಡ, ನಟಿ ತಾರಾ, ರಾಗಿಣಿ, ಸುಧಾರಾಣಿ, ನವೀನ್ ಕೃಷ್ಣ ಅವರ ಹೆರಸುಗಳೂ ಕೂಡ ಕೇಳಿಬಂದಿದ್ದವು. ಆದ್ರೆ ಈಗ ಅವೆಲ್ಲದಕ್ಕೂ ಫುಲ್ ಸ್ಟಾಪ್ ಬಿದ್ದಿದೆ.

ಭಾನುವಾರದಂದು ಪ್ರಸಾರವಾದ ಬಿಗ್‍ಬಾಸ್ ಸೀಸನ್ 4ರ ಮೊದಲ ಸಂಚಿಕೆಯಲ್ಲೇ ಇದಕ್ಕೆ ಉತ್ತರ ಸಿಕ್ಕಿದೆ. ನ್ಯೂಸ್ ವಾಹಿನಿ ನಿರೂಪಕಿ ಶೀತಲ್ ಶೆಟ್ಟಿ, ಸ್ಪರ್ಶ ಚಿತ್ರ ಖ್ಯಾತಿಯ ರೇಖಾ, ಕಿರುತೆರೆ ನಟಿಯರಾದ ಕಾವ್ಯ ಶಾಸ್ತ್ರಿ, ಸಂಜನಾ ಚಿದಾನಂದ್, ಹಿರಿಯ ನಟಿ ಮಾಳವಿಕಾ ಅವಿನಾಶ್, ಕಿರಿಕ್ ಕೀರ್ತಿ, ನಿರ್ದೇಶಕ ಪ್ರಥಮ್, ಗಾಯಕಿ ಚೈತ್ರ, ಮಾಡೆಲ್ ಭುವನ್ ಪೊನ್ನಣ್ಣ, ಮಾಜಿ ರಣಜಿ ಅಟಗಾರ ದೊಡ್ಡ ಗಣೇಶ್, ನಟ ಮೋಹನ್, ಪಾಪಾ ಪಾಂಡು ಧಾರಾವಾಹಿ ಖ್ಯಾತಿಯ ಶಾಲಿನಿ, ಆರ್‍ಜೆ ನಿರಂಜನ್ ಹಾಗೂ ನಟಿ ಕಾರುಣ್ಯ ರಾಮ್ ಈ ಬಾರಿ ಬಿಗ್‍ಬಾಸ್‍ನ ಸ್ಪಧಿಗಳು.

ಹಾಗೆ ಕಳೆದ ಬಾರಿಗಿಂತ ಬಿಗ್‍ಬಾಸ್ ಮನೆಯ ಒಳಾಂಗಣ ವಿನ್ಯಾಸವೂ ಬದಲಾಗಿದೆ. ವಿಶಾಲವಾದ ಹಾಲ್, ದೊಡ್ಡ ಸೋಫಾ, ಕಲರ್‍ಫುಲ್ ಬೆಡ್‍ರೂಮ್ ಎಲ್ಲವೂ ಹೊಸತು. ಹಾಗೇ ಈ ಬಾರಿ ಬಿಗ್‍ಬಾಸ್ ಮನೆಯಲ್ಲಿ ಫೋನ್‍ಬೂತ್ ಕೂಡ ಇದೆ. ಆದ್ರೆ ಆ ಫೋನ್‍ಗೆ ಯಾರು ಕರೆ ಮಾಡ್ತಾರೆ? ಇದಕ್ಕೆ ಈಗಲೇ ಉತ್ತರ ಹೇಳಲು ಸಾಧ್ಯವಿಲ್ಲ. ಕಾರ್ ರೀತಿ ಕಾಣುವ ಕನ್‍ಫೆಷನ್ ರೂಮ್ ವಿನ್ಯಾಸಗೊಳಿಸಲಾಗಿದೆ. ಸ್ಪರ್ಧಿಗಳಿಗೆ ಮೊದಲ ಟಾಸ್ಕ್ ಅಂತ ರೂಬಿಕ್ಸ್ ಕ್ಯೂಬ್ ಪಜಲ್ ಬಗೆಹರಿಸಲು ಹೇಳಲಾಗಿದೆ.

ಸದ್ಯಕ್ಕೆ ಈ ಎಲ್ಲಾ 15 ಮಂದಿ ಬಿಗ್‍ಬಾಸ್ ಮನೆಯಲ್ಲಿ ಲಾಕ್ ಆಗಿದ್ದಾರೆ. ಮುಂದಿನ ವಾರ ಯಾರು ಕ್ಯಾಪ್ಟನ್ ಆಗ್ತಾರೆ? ಯಾರು ನಾಮಿನೇಟ್ ಆಗ್ತಾರೆ? 100 ದಿನಗಳವರೆಗೆ ಬಿಗ್‍ಬಾಸ್ ಮನೆಯಲ್ಲಿ ಯಾರು ಉಳಿಯುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಮುಂದೆ ಉತ್ತರ ಸಿಗಲಿದೆ.

ಹೊಸ ಮನೆ ಹೇಗಿದೆ?: ಬಿಗ್ ಬಾಸ್ ಶೋಗಳು ಪುಣೆಯ ಲೋನಾವಾಲದಲ್ಲಿ ನಡೆಯುತ್ತಿದ್ದರೆ ಕಳೆದ ವರ್ಷದಿಂದ ಕನ್ನಡ ಬಿಗ್ ಬಾಸ್ ಶೋ ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಕಳೆದ ವರ್ಷದ ಮನೆಯನ್ನು ಸಂಪೂರ್ಣವಾಗಿ ಒಡೆದು ಹೊಸದಾಗಿ ನಿರ್ಮಿಸಲಾಗಿದೆ.20 ಸಾವಿರ ಚದುರ ಅಡಿ ವಿಸ್ತೀರ್ಣದ ಜಾಗದಲ್ಲಿ ಈ ಮನೆಯನ್ನು ಒಟ್ಟು 1.3 ಕೋಟಿ ರೂ. ವೆಚ್ಚದಲ್ಲಿ ಸುಂದರವಾಗಿ ನಿರ್ಮಿಸಲಾಗಿದೆ.

ವಿನ್ಯಾಸಕ ಯಾರು?: ಹೊಸ ಮನೆಯನ್ನು ಶ್ಯಾಮ್ ಬಾಟಿಯಾ ಅವರು ವಿನ್ಯಾಸಗೊಳಿಸಿದ್ದಾರೆ. ಡ್ಯಾನ್ಸ್ ಇಂಡಿಯಾ, ಸರಿಗಮಪ ಸೇರಿದಂತೆ ಹಲವು ರಿಯಾಲಿಟಿ ಶೋಗಳ ವಿನ್ಯಾಸವನ್ನು ಶ್ಯಾಮ್ ಬಾಟಿಯಾ ಮಾಡಿದ್ದಾರೆ.

Comments are closed.