ಬೆಂಗಳೂರು: ಗುರುವಾರದಂದು ಬಿಡುಗಡೆಯಾದ `ಜಾಗ್ವಾರ್’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಜಾಗ್ವಾರ್ ಜಾತ್ರೆ ಎಂಬ ವಿಶೇಷ ಬೈಕ್ ಮೆರವಣಿಗೆ ಮಾಡಿದೆ.
ನಗರದ ಕಂಠೀರವ ಸ್ಟುಡಿಯೋದಲ್ಲಿರುವ ವರನಟ ಡಾ.ರಾಜ್‍ಕುಮಾರ್ ಸಮಾಧಿಗೆ ನಮಸ್ಕರಿಸಿ ಬೈಕ್ ಮೆರವಣಿಗೆ ಪ್ರಾರಂಭಿಸಲಾಯ್ತು. ಈ ಸಂದರ್ಭದಲ್ಲಿ ಜಾಗ್ವಾರ್ ಚಿತ್ರದ ನಿರ್ಮಾಪಕ ಹೆಚ್‍ಡಿ ಕುಮಾರಸ್ವಾಮಿ ಕೂಡ ಭಾಗಿಯಾಗಿದ್ರು.
ಎರಡು ಸಾವಿರ ಮಂದಿ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡ್ರೆ ಸುಮಾರು 8 ಸಾವಿರ ಅಭಿಮಾನಿಗಳು ರಾಜ್ ಸಮಾಧಿ ಬಳಿ ಜಮಾಯಿಸಿದ್ರು. ರಾಜ್‍ಕುಮಾರ್ ಸಮಾಧಿಯಿಂದ ಶುರುವಾದ ಮೆರವಣಿಗೆಯನ್ನು ಮೆಜೆಸ್ಟಿಕ್‍ನ ಕೆಜಿ ರಸ್ತೆಯ ಸಂತೋಷ್ ಥಿಯೇಟರ್ ಬಳಿ ಸಮಾಪ್ತಿ ಮಾಡಲಾಯಿತು.
ಹೆಚ್‍ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಮೊದಲನೇ ಸಿನಿಮಾದ ಮೂಲಕವೇ ಭರ್ಜರಿ ಹಿಟ್ ನೀಡಿದ್ದು, ಸಿನಿಮಾ ನೊಡಿದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಗುರುವಾರದಂದು ವಿಶ್ವದಾದ್ಯಂತ 1 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಜಾಗ್ವಾರ್ ಚಿತ್ರ ಯಶಸ್ವಿ ಪ್ರದರ್ಶನ ಕಾಣ್ತಿದೆ.