ರಾಷ್ಟ್ರೀಯ

ವಾಘಾ ಗಡಿಯಲ್ಲಿ ಭಾರತ-ಪಾಕ್ ಯೋಧರಿಂದ ರಿಟ್ರೀಟ್ ಮತ್ತೆ ಆರಂಭ

Pinterest LinkedIn Tumblr

wagahನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯ ಬಳಿಕ ವಾಘಾ ಗಡಿಯಲ್ಲಿ ರದ್ದುಗೊಂಡಿದ್ದ ಬೀಟಿಂಗ್ ದಿ ರಿಟ್ರೀಟ್ ಮತ್ತೆ ಆರಂಭಗೊಂಡಿದ್ದು ಭಾರತ ಮಾತಾಕೀ ಜೈ ಜಯ ಘೋಷ ಮೊಳಗಿತು.
ನಿನ್ನೆ ಸಂಜೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಪರ್ಕ ರಸ್ತೆಯಾಗಿರುವ ವಾಘಾ ಗಡಿಯಲ್ಲಿ ಬೀಟಿಂಗ್ ದಿ ರಿಟ್ರೀಟ್ ಕವಾಯತು ನಡೆಯಿತು. ಈ ವೇಳೆ ಭಾರತ ಕಡೆ ಸೇರಿದ್ದ ಸಾವಿರಾರು ಭಾರತೀಯರು ಭಾರತ ಮಾತಾಕೀ ಜೈ ಎಂದು ಕೂಗುತ್ತ ಭಾರತೀಯ ಯೋಧರ ಆತ್ಮಸ್ಥೈರ್ಯ ಹೆಚ್ಚಿಸಿದರು.
ಉರಿ ದಾಳಿಗೆ ಪ್ರತಿಕಾರವಾಗಿ ಭಾರತೀಯ ಯೋಧರು ಸೆಪ್ಟೆಂಬರ್ 29ರಂದು ಮಧ್ಯರಾತ್ರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 7 ಉಗ್ರ ತಾಣಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ 38 ಉಗ್ರರನ್ನು ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ ಪಾಕಿಸ್ತಾನ ಸೈನಿಕರು ಸಾವನ್ನಪ್ಪಿದ್ದರು.
ಭಾರತೀಯ ಯೋಧರ ಸೀಮಿತ ದಾಳಿ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪಾಕಿಸ್ತಾನ ಯುದ್ಧ ಮಾಡುವ ಸಾಧ್ಯತೆಗಳಿತ್ತು. ಹೀಗಾಗಿ ಗಡಿಯಿಂದ 10 ಕಿ.ಮೀ ವ್ಯಾಪ್ತಿಯಿಂದ ಭಾರತೀಯ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿತ್ತು.

Comments are closed.