ಮನೋರಂಜನೆ

ಸಮಂತಾ ಜೊತೆ ಸಪ್ತಪದಿ: ನಾಗ ಚೈತನ್ಯ

Pinterest LinkedIn Tumblr

samanthaಹೈದರಾಬಾದ್: ಹಲವು ದಿನಗಳಿಂದ ನಟಿ ಸಮಂತಾ ಜೊತೆ ಪ್ರೀತಿಯ ಬಗ್ಗೆ ಎದ್ದಿದ್ದ ಎಲ್ಲಾ ಗಾಸಿಪ್ ಗಳಿಗೂ ನಾಗಚೈತನ್ಯ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಮುಂದಿನ ವರ್ಷ ನಟಿ ಸಮಂತಾ ಜೊತೆ ವಿವಾಹವಾಗುವುದಾಗಿ ಅವರು ಬಹಿರಂಗ ಪಡಿಸಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿರುವ ನಾಗ ಚೈತನ್ಯ, ನಾನು ತೀರಾ ಖಾಸಗಿ ವ್ಯಕ್ತಿ, ನನ್ನ ಪ್ರೀತಿ ವಿಷಯವನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಬೇಕೆಂದು ನನಗೆ ಯಾವತ್ತೂ ಅನ್ನಿಸಿಲ್ಲ. ನಮ್ಮಿಬ್ಬರ ಪ್ರೀತಿ ವಿಷಯ ನನ್ನ ಸ್ನೇಹಿತರಿಗೆ ಹಲವು ದಿನಗಳಿಂದ ತಿಳಿದಿತ್ತು. ಈ ವಿಷಯವನ್ನು ನಾವಿಬ್ಬರು ನಮ್ಮ ಪೋಷಕರ ಬಳಿ ತಿಳಿಸಿದೆವು, ಅವರ ಒಪ್ಪಿಗೆ ಸಿಕ್ಕಿದ್ದು ಮುಂದಿನ ವರ್ಷ ಸಪ್ತಪದಿ ತುಳಿಯುವುದಾಗಿ ಅವರು ಹೇಳಿದ್ದಾರೆ.

ನಮ್ಮ ತಂದೆಯ ಹತ್ತಿರ ನಾನು ಈ ವಿಷಯ ತಿಳಿಸಿದಾಗ, ಮೊದಲು ನನ್ನ ಮುಖ ನೋಡಿದ ಅವರು, ನನಗೆ ಈ ಬಗ್ಗೆ ಬಹಳ ಹಿಂದೆಯೇ ತಿಳಿದಿತ್ತು, ಎಂದರು, ನನ್ನ ಪೋಷಕರು ನನ್ನ ಎಲ್ಲಾ ಇಷ್ಟಗಳಿಗೂ ಬೆಂಬಲ ನೀಡುತ್ತಾರೆ ಎಂದು ನಾಗ ಚೈತನ್ಯ ವಿವರಿಸಿದರು.

Comments are closed.