ಮನೋರಂಜನೆ

ಪಾಕ್ ಕಲಾವಿದರ ಬಗ್ಗೆ ನಟಿ ಹೇಮಾ ಮಾಲಿನಿ ಹೇಳಿದ್ದು ಹೀಗೆ….

Pinterest LinkedIn Tumblr

hema

ಮುಂಬೈ: ಪಾಕಿಸ್ತಾನದ ಕಲಾವಿದರಿಗೆ ಭಾರತದಲ್ಲಿ ನಿರ್ಬಂಧ ವಿಧಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಹೇಮಾ ಮಾಲಿನಿ ‘ನಮ್ಮ ರಾಷ್ಟ್ರದ ಸೈನಿಕರ ಪರವಾಗಿ ಶೇ.100 ರಷ್ಟು ನನ್ನ ಬೆಂಬಲವಿದೆ ಹೊರತು ಪಾಕಿಸ್ತಾನದ ಕಲಾವಿದರಿಗಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ರಾಷ್ಟ್ರದ ಪರವಾಗಿ ಹೋರಾಡುವ ಸೈನಿಕರ ಪರವಾಗಿ ನಮ್ಮ ಬೆಂಬಲ ನಿರಂತರವಾದದ್ದು ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ತಿಳಿಸಿದ್ದಾರೆ.

ಇತ್ತೀಚೆಗೆ ಭಾರತೀಯ ಸೇನೆ ಪಾಕ್‌ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ ನೆಲೆಗಳ ಮೇಲೆ ನಡೆಸಿದ ಸರ್ಜಿಕಲ್‌ ದಾಳಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸರ್ಜಿಕಲ್ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಗೆ ಹಿಡಿ ರಾಷ್ಟ್ರವೇ ಬೆಂಬಲವಾಗಿ ನಿಂತಿತ್ತು ಎಂದು ಹೇಳಿದರು.

ಒಬ್ಬ ಕಲಾವಿದೆಯಾಗಿ ಪಾಕಿಸ್ತಾನ ಕಲಾವಿದರ ಪರಿಶ್ರಮವನ್ನು ಪ್ರಶಂಸಿಸುತ್ತೇನೆ. ಆದರೆ ಅವರು ಇಲ್ಲಿ ಉಳಿಯಬೇಕೋ ಅಥವಾ ನಮ್ಮ ರಾಷ್ಟ್ರ ತೊರೆಯಬೇಕೇ? ಎಂಬ ವಿಚಾರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದರು.

ಕಲಾವಿದರೆಂದರೆ ಅವರು ಭಾರತಿಯರೇ ಆಗಲೀ ಅಥವಾ ಪಾಕಿಸ್ತಾನದವರೇ ಆಗಲಿ ಅವರು ಎಂದಿಗೂ ಕಲಾವಿದರೇ. ಆದರೆ ದುರದೃಷ್ಟಕರ ಅವರು ಪಾಕಿಸ್ತಾನದವರು, ಅವರು ಉತ್ತಮ ಕಲಾವಿದರಾಗಿಯೇ ಭಾರತದಲ್ಲಿ ಅಭಿನಯಿಸಿದ್ದಾರೆ ಎಂದರು.

ಪಾಕಿಸ್ತಾನ ಕಲಾವಿದರು ಭಾರತ ತ್ಯಜಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಬಾಲಿವುಡ್‌ ಅಂಗಳದಲ್ಲಿ ಪರ–ವಿರುದ್ಧದ ಚರ್ಚೆಗಳು ನಡೆಯುತ್ತಿವೆ.

Comments are closed.