
ಮುಂಬೈ: 2013ರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ನಟಿ ಜಿಯಾಖಾನ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಜಿಯಾ ಸಾವಿಗೀಡಾಗಿ 3 ವರ್ಷದ ಬಳಿಕ ಪ್ರಕರಣಕ್ಕೆ ಜೀವ ಬಂದಿದೆ.
ಮೊದ ಮೊದಲು ಬಾಯ್`ಫ್ರೆಂಡ್ ಸೂರಜ್ ಪಂಚೋಲಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ಕೇಳಿಬಂದಿತ್ತು. ಬಳಿಕ ಸಿಬಿಐ ಜಿಯಾಖಾನ್ ಸಾವು ಆತ್ಮಹತ್ಯೆಯಿಂದ ಸಂಬಂಧಿಸಿದೆ ಎಂದು ವರದಿ ನೀಡಿತ್ತು. ಇದೀಗ, ಜಿಯಾ ತಾಯಿ ರಾಬಿಯಾ ನೇಮಿಸಿದ್ದ ವಿದೇಶಿ ವಿಧಿ ವಿಜ್ಞಾನ ತಜ್ಞನೊಬ್ಬ ಜಿಯಾಖಾನ್ ಅವರದ್ದು ಆತ್ಮಹತ್ಯೆಯಲ್ಲ, ನೇಣು ಹಾಕಲಾಗಿದೆ ಎಂದು ಹೇಳಿದ್ದಾನೆ.
ಮುಂಬೈ ಮಿರರ್ ಮಾಡಿರುವ ವರದಿಯ ಪ್ರಕಾರ, ಜಿಯಾಖಾನ್ ಸಾವಿನ ಕುರಿತಂತೆ ಸಿಬಿಐ ನಿಡಿದ್ದ ವರದಿ ಬಗ್ಗೆ ಅಸಮಾಧಾನಗೊಂಡಿದ್ದ ತಾಯಿ ರಾಬಿಯಾ, ಜೇಸನ್ ಪೇಯ್ನ್ ಜೇಮ್ಸ್ ಎಂಬ ಬ್ರಿಟಿಷ್ ಪೊರೆನ್ಸಿಕ್ ಎಕ್ಸ್`ಪರ್ಟ್ ಮೊರೆಹೋಗಿದ್ದರು. ಈ ವರದಿಯನ್ನ ರಾಬಿಯಾ ಮುಂಬೈ ಸೆಷನ್ಸ್ ಕೋರ್ಟ್ ಮುಮದಿಡಲಿದ್ದು, ನ್ಯಾಯಾಲಯದಲ್ಲಿ ನಿರ್ಧಾರ ಏನಿರುತ್ತೆ ಎಂಬುದು ಕುತೂಹಲ ಕೆರಳಿಸಿದೆ.
Comments are closed.