ಮುಂಬಯಿ : ‘ನನ್ನ ನಯವಾದ ಸುಂದರ ಕಾಲುಗಳು ಇಂದು ನಾನಿರುವ ಜಗತ್ತಿನ ಈ ಭಾಗದಲ್ಲಿ ಹನ್ನೆರಡರಿಂದ ಹದಿನೈದು ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮಾರುತ್ತಿವೆ, ಗೊತ್ತಾ’ ಎಂದು ಬಾಲಿವುಡ್ – ಹಾಲಿವುಡ್‌ನ ಜನಪ್ರಿಯ ನಟಿ ಪ್ರಿಯಾಂಕಾ ಚೋಪ್ರಾ ಹೆಮ್ಮೆಯಿಂದ ಹೇಳಿಕೊಂಡಿರುವುದನ್ನು ಕಂಡರೆ ಆಕೆಯ ಹಾಗಿನ ಯಾವುದೇ ಹುಡುಗಿಗೂ ಅಸೂಯೆ ಉಂಟಾಗದಿರದು !
ಅಮೆರಿಕದ ಡಬ್ಲ್ಯು ಮ್ಯಾಗಝೀನ್ ಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ಈ ರೀತಿಯಾಗಿ ಹೇಳಿಕೊಂಡಿದ್ದಾಳೆ :
‘ನಾನು ಹದಿಹರೆಯವದಳಿದ್ದಾಗ ನಾನೋರ್ವ ಟಾಮ್ ಬಾಯ್ ಥರ ಇದ್ದೆ. ನನ್ನ ದೇಹದ ಮೇಲೆ ಕಲೆಗಳಿದ್ದವು. ನನ್ನ ತೊಡೆ, ಕಾಲುಗಳ ಬಗ್ಗೆ ನನಗೇ ಮುಜುಗರವಿತ್ತು. ಏಕೆಂದರೆ ಅವು ಜಗತ್ತಿನ ಅಂತಹ ಸುಂದರ ಕಾಲುಗಳೇನೂ ಆಗಿರಲಿಲ್ಲ. ಆದರೆ ಕ್ರಮೇಣ ನನಗೆ ದೇಹ ಸೌಂದರ್ಯದ ಮಹತ್ವ ಏನೆಂಬ ಅರಿವಾಯಿತು. ಆಗಲೇ ನಾನು ಎಚ್ಚೆತ್ತುಕೊಂಡು ದೇಹದ ಆರೈಕೆಗೆ ಪ್ರಾಮುಖ್ಯ ನೀಡತೊಡಗಿದೆ. ಇವತ್ತು ನನ್ನ ನಯವಾದ ಸುಂದರ ಕಾಲುಗಳು 12ರಿಂದ 15 ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮಾರುತ್ತಿವೆ. ನನಗಿದು ಸಾಧ್ಯವಾಗಿದೆ ಎಂದಾದರೆ ನನ್ನಂತಹ ಯಾವುದೇ ಹುಡುಗಿಗೂ ಕೂಡ ಇದು ಸಾಧ್ಯವಾಗಬೇಕು’.
ಪ್ರಿಯಾಂಕಾ ಚೋಪ್ರಾ ಈಚಿನ ಎಬಿಸಿ “ಕ್ವಾಂಟಿಕೋ’ ಟಿವಿ ಸೀರಿಯಲ್‌ನಿಂದಾಗಿ ಪಾಶ್ಚಾತ್ಯ ದೇಶಗಳಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಮೇಲಾಗಿ ಆಕೆಯ ಮುಂಬರಲಿರುವ “ಬೇ ವಾಚ್’ ಎಂಬ ಹಾಲಿವುಡ್ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇಡಲಾಗಿದೆ.
ಇಂದು ಪ್ರಿಯಾಂಕಾ ಚೋಪ್ರಾ ವಿಶ್ವಾದ್ಯಂತದ ಯುವತಿಯರಿಗೆ ಸೌಂದರ್ಯದ ಪ್ರತೀಕವಾಗಿದ್ದಾಳೆ. ಅಂತೆಯೇ ಆಕೆಯ ಪ್ರತಿಯೊಂದು ಫ್ಯಾಶನ್ ಅನ್ನು ಹುಡುಗಿಯರು ನಿಕಟವಾಗಿ ಫಾಲೋ ಮಾಡುತ್ತಿದ್ದಾರೆ.
ಮಿಸ್ ವರ್ಲ್ಡ್ ಪ್ರಶಸ್ತಿಯನ್ನು ತಾನು ಪಡೆದೇನೆಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ ಎಂದು ಹೇಳುವ ಪ್ರಿಯಾಂಕಾ, ಅಮೆರಿಕದಲ್ಲಿ ಶಾಲಾ ಶಿಕ್ಷಣ ನಡೆಸುತ್ತಿದ್ದಾಗ ಅಲ್ಲಿನ ಜನಾಂಗೀಯ ತಾರತಮ್ಯದ ವಿರುದ್ಧ ದಿಟ್ಟತನದಿಂದ ಹೋರಾಡಿದ್ದಳು.
-ಉದಯವಾಣಿ
Comments are closed.