ಮನೋರಂಜನೆ

ಕಾವೇರಿಗಾಗಿ ನಡೆಯುತ್ತಿರುವ ಹೋರಾಟದ ಕುರಿತು ಅಮೆರಿಕದಲ್ಲಿಂದಲೇ ಮಂಡ್ಯ ಶಾಸಕ ಅಂಬರೀಷ್ ಏನು ಹೇಳಿದ್ರು ಗೊತ್ತಾ..? ಅವರ ಸ್ಪಷ್ಟನೆ ಇಲ್ಲಿದೆ ನೋಡಿ…

Pinterest LinkedIn Tumblr

ambarish

ವಾಷಿಂಗ್ಟನ್: ಮಂಡ್ಯ ಶಾಸಕ ಅಂಬರೀಷ್ ಅಮೆರಿಕದಿಂದಲೇ ಮಂಡ್ಯ ಜನರ ಆಕ್ರೋಶವನ್ನ ಶಮನ ಮಾಡಲು ಯತ್ನಿಸಿದ್ದು, ಸ್ಪಷ್ಟನೆ ಬಿಡುಗಡೆ ಮಾಡಿದ್ದಾರೆ.

ambi

ಅಮೆರಿಕಾದಿಂದಲೇ ಪತ್ರದ ಮೂಲಕ ಮನವಿ ಮಾಡಿರುವ ಅಂಬರೀಷ್, ಸುಪ್ರೀಂಕೋರ್ಟ್ ತೀರ್ಪು ನಿಜಕ್ಕೂ ದುರದೃಷ್ಟಕರ. ನಮಗೇ ಕುಡಿಯಲು ನೀರಿಲ್ಲ. ತಮಿಳುನಾಡಿಗೆ ಬೆಳೆಗೆ ನೀರು ಬಿಡಲು ಆದೇಶಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶಕ್ಕೆ ಮಾಹಿತಿ ಕೊರತೆ ಕಾರಣ ಅನ್ನೋದು ನನ್ನ ಭಾವನೆ. ಸರ್ಕಾರ ಈಗಲಾದರೂ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು. ರಾಜ್ಯದ ಸ್ಥಿತಿ ಮನವರಿಕೆ ಮಾಡಿಕೊಡಬೇಕು. ರೈತರಿಗೆ ಆಗುತ್ತಿರುವ ನಷ್ಟಕ್ಕೆ ಸರ್ಕಾರ ಪರಿಹಾರ ಕೊಡಬೇಕು ಎಂದು ಹೇಳಿದ್ದಾರೆ.

ರೈತರು ಸಂಯಮ ಕಳೆದುಕೊಳ್ಳದೆ ಶಾಂತಿಯುತವಾಗಿ ಹೋರಾಡಬೇಕು ಎಂದು ಅಮೆರಿಕಾದಿಂದಲೇ ಅಂಬರೀಷ್ ಮನವಿ ಮಾಡಿದ್ದಾರೆ. ನಾನು ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಹಾಗೂ ಆರೋಗ್ಯ ತಪಾಸಣೆಗಾಗಿ ಅಮೆರಿಕಗೆ ಬಂದಿರುತ್ತೇನೆ ಎಂದು ತಿಳಿಸಿದ್ದಾರೆ.

Comments are closed.