ರಾಷ್ಟ್ರೀಯ

ಗಂಡು ಮಗುವಿನ ಮೋಹಕ್ಕೆ 4 ತಿಂಗಳ ಹೆಣ್ಣು ಮಗುವನ್ನು 17 ಬಾರಿ ಇರಿದು ಹತ್ಯೆ ಮಾಡಿರುವ ಮಹಾತಾಯಿ !

Pinterest LinkedIn Tumblr

neha

ಜೈಪುರ: ಗಂಡು ಮಗುವಿನ ಮೋಹಕ್ಕೆ ತಾಯಿಯೊಬ್ಬಳು ತನ್ನ ಹೆಣ್ಣು ಮಗುವನ್ನೇ 17 ಬಾರಿ ಇರಿದು ಹತ್ಯೆ ಮಾಡಿರುವ ಘಟನೆ ಜೈಪುರದಲ್ಲಿ ನಡೆದಿದೆ.

ನೇಹಾ ಗೋಹಾಲ್ ಎಂಬಾಕೆ ತನ್ನ ನಾಲ್ಕು ತಿಂಗಳ ಮಗವನ್ನೇ ಹತ್ಯೆ ಮಾಡಿದ್ದು, ಇದೀಗ ಜೈಲು ಸೇರಿದ್ದಾಳೆ. ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ನೇಹಾಗೆ ಯಾವಾಗ ಎರಡನೇ ಮಗುವೂ ಹೆಣ್ಣಾಗಿತ್ತೋ ಇದರಿಂದ ಹತಾಶಳಾದ ಆಕೆ ಮಗವನ್ನೇ ಕೊಲೆ ಮಾಡಿದ್ದಾಳೆ.

neha22

neha1

ಆಗಸ್ಟ್ 26ರಂದು ತನ್ನದೇ ಮಗುವನ್ನ ಚಾಕುವಿನಿಂದ ಕೊತ್ತಿಗೆ ಸೇರಿದಂತೆ 17 ಬಾರಿ ಇರಿದಿದ್ದ ನೇಹಾ ನಂತರ ಅದರ ದೇಹವನ್ನ ಬಳಸದೇ ಇಟ್ಟಿದ್ದ ಎಸಿವೊಳಗೆ ಬೆಡ್‍ಶೀಟ್‍ನಿಂದ ಕವರ್‍ಮಾಡಿ ಹಾಕಿದ್ದಳು. ನಂತರ ಮಗು ಕಾಣಿಸುತ್ತಿಲ್ಲವೆಂದು ನಾಟಕವಾಡಿದ್ದಳು.

ಇದಾದ ಬಳಿಕ ಮನೆಯವರೆಲ್ಲ ಸತತ 2 ಗಂಟೆ ಹುಡುಕಿದಾಗ ಮಗುವಿನ ದೇಹ ಎಸಿಯಲ್ಲಿ ಪತ್ತೆಯಾಗಿತ್ತು. ಈ ವೇಳೆ ನೇಹಾ ಬೆಡ್‍ರೂಮ್ ಹಾಗೂ ಬಾತ್‍ರೂಮ್ ಒಪರಿಶೀಲನೆ ಮಾಡಿದಾಗ ನೇಹಾ ಬಾತ್‍ರೂಮ್ ಆಗತಾನೇ ಸ್ವಚ್ಛವಾಗಿರುವುದು ಕಂಡುಬಂದಿತ್ತು. ನಂತರ ತನಿಖೆ ಆರಂಭಿಸಿದ್ದ ಪೊಲೀಸರ ಎಲ್ಲರ ಬೆರಳಚ್ಚನ್ನ ಪಡೆದುಕೊಂಡಿದ್ದಾರೆ. ನಂತರ ಕೊಲೆ ಮಾಡಿರುವುದು ನೇಹಾಳೇ ಎಂದು ತಿಳಿದುಬಂದಿದೆ.

ಅರೆಸ್ಟ್ ಆಗಿರುವ ನೇಹಾ, ತಾನೇ ಕೊಲೆ ಮಾಡಿರುವುದಾಗಿ ಹೇಳಿದ್ದು, ಗಂಡು ಮಗುವಿಗಾಗಿ ಪೂಜೆ ಮಾಡಿದ್ದು, ಹಲವು ವ್ರತಗಳನ್ನ ಮಾಡಿದ್ದು, ಇದಾದ ಬಳಿಕವೂ ಹೆಣ್ಣು ಮಗುವಾಗಿದ್ದರಿಂದ ಖಿನ್ನತೆಗೆ ಒಳಗಾಗಿದ್ದು, ಆಗಿಂದಲೂ ನಾನು ಮಗುವಿನ ಕೊಲೆಗೆ ಪ್ಲಾನ್ ಮಾಡಿದ್ದಾಗಿ ಹೇಳಿದ್ದಾಳೆ.

Comments are closed.