ಮನೋರಂಜನೆ

ಕಾವೇರಿ ಹೋರಾಟದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದು ಹೀಗೆ….!!!

Pinterest LinkedIn Tumblr

darshan

ಮಂಡ್ಯ: ನಾನು ರೈತನ ಮಗ, ನಮ್ಮ ಜನರ ಬಳಿ ಬರಲು ನನಗೆ ಯಾವ ಸೆಕ್ಯುರಿಟಿ ಬೇಡ, ರೈತರ ಪವರ್ ಇನ್ನು ಗೊತ್ತಾಗಿಲ್ಲ ಅವರು ಸಿಡಿದೆದ್ದರೆ ಯಾರು ತಡಿಯೋಕ್ಕಾಗಲ್ಲ ಎಂದು ಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾವೇರಿ ಹೋರಾಟದಲ್ಲಿ ನಾನು ಸದಾ ನಿಮ್ಮ ಜೊತೆಗಿರುತ್ತೇನೆ. ಕಾವೇರಿ ಹೋರಾಟಕ್ಕೆ ಕೇವಲ ಮಂಡ್ಯದ ಜನರು ಮಾತ್ರವಲ್ಲ ಬೆಂಗಳೂರಿನವರು ಪಾಲ್ಗೊಳ್ಳಬೇಕು. ನಾನು ಕಲಾವಿದನಾಗಿ ಬಂದಿಲ್ಲ ರೈತನ ಮಗನಾಗಿ ಬಂದಿದ್ದೇನೆ. ಕಾವೇರಿ ವಿಷಯದಲ್ಲಿ ಈ ಬಾರಿ ನಮಗೆ ತುಂಬಾ ಅನ್ಯಾಯವಾಗಿದೆ.ನಾವು ಕನ್ನಡಿಗರು ವಿಶಾಲ ಹೃದಯದವರು ಎಂದು ಹೇಳಿಕೊಂಡು ನಮ್ಮ ತಲೆಯ ಮೇಲೆ ನಾವೇ ಚಪ್ಪಡಿ ಕಲ್ಲು ಎಳೆದುಕೊಳ್ಳುತ್ತಿದ್ದೇವೆ. ಸರ್ಕಾರಕ್ಕೆ ಹೇಳುವಷ್ಟು ನಾನು ದೊಡ್ಡವನಲ್ಲ. ರೈತರಿಗೆ ಅನ್ಯಾಯವಾಗಬಾರದು ಎಂಬುದೇ ನನ್ನ ಕಾಳಜಿ ಎಂದು ತಿಳಿಸಿದರು.

Comments are closed.