ಮನೋರಂಜನೆ

ಬಾಹುಬಲಿ-2 ಬಗ್ಗೆ ತಮನ್ನಾ ಹೇಳಿದ್ದೇನು ಗೊತ್ತೇ..?

Pinterest LinkedIn Tumblr

Tamannaಹಾಲಿವುಡ್ ಚಿತ್ರಕ್ಕೆ ಸರಿಸಾಟಿಯಾಗಿ ವಿಶ್ವ ಮನ್ನಣೆ ಗಳಿಸಿದ್ದ ‘ಬಾಹುಬಲಿ’ ಸಿನಿಮಾದ ಎರಡನೆ ಭಾಗ ಭಾವೋದ್ವೇಗಗೊಳಿಸಿದೆ ಎನ್ನುತ್ತಾರೆ ಮೋಹಕ ಚೆಲುವೆ ತಮನ್ನಾ ಬಾಟಿಯಾ.
ಬ್ಲಾಕ್ ಬಸ್ಟರ್ ಐತಿಹಾಸಿಕ ಸಾಹಸಮಯ ‘ಬಾಹುಬಲಿ’ ಮೊದಲ ಭಾಗದಲ್ಲಿ ಅವಂತಿಕಾ ಪಾತ್ರದಲ್ಲಿ ಮಿಂಚಿದ್ದ ಈ ನಟಿ ‘ಬಾಹುಬಲಿ-2’ ಚಿತ್ರದ ಬಗ್ಗೆ ನಡುಕಕ್ಕಿಂತ ಭಾವೋದ್ವೇಗವೇ ಹೆಚ್ಚಾಗಿದೆ ಎಂದಿದ್ದಾಳೆ. ಈ ಚಿತ್ರದ ಬಗ್ಗೆ ಒಂದೆಡೆ ಸಿನಿಮಾ ಪ್ರೇಮಿಗಳು ಕಾತುರರಾಗಿದ್ದರೆ, ಇನ್ನೊಂದೆಡೆ ಚಿತ್ರತಂಡ ಮುಂದಿನ ಫಲಿತಾಂಶದ ಬಗ್ಗೆ ಭಾವೋದ್ವೇಗಕ್ಕೆ ಒಳಗಾಗಿದೆ ಎಂದು ಮುಂಬೈನಲ್ಲಿ ಮಾಧ್ಯಮ ಮಂದಿಯೊಂದಿಗೆ ಮಾತನಾಡುತ್ತ ಪ್ರತಿಕ್ರಿಯಿಸಿದ್ದಾಳೆ.

ತೆಲುಗು ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹುಭಾಷಾ ‘ಬಾಹುಬಲಿ: ದಿ ಬಿಗಿನಿಂಗ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿ, ಹಿಂದಿನ ಎಲ್ಲ ದಾಖಲೆಗಳನ್ನು ನುಚ್ಚುನೂರು ಮಾಡಿತು. ಅಲ್ಲದೆ, ಈ ವರ್ಷದ ರಾಷ್ಟ್ರೀಯ ಪ್ರಶಸ್ತಿಯನ್ನೂ ಗೆದ್ದುಕೊಂಡಿತ್ತು. ಮೊದಲ ಭಾಗ ತೆರೆ ಕಾಣುವುದಕ್ಕೂ ಮುನ್ನ ಚಿತ್ರತಂಡದಲ್ಲಿ ಆತಂಕ ಮನೆ ಮಾಡಿತ್ತು. ಈ ಐತಿಹಾಸಿಕ ಸಿನಿಮಾವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ. ಈ ಸಿನಿಮಾ ಯಶಸ್ಸು ಸಾಧಿಸುತ್ತದೆಯೇ ಎಂಬ ಭಯವೂ ಕಾಡಿತು. ಮೊದಲ ಭಾಗದ ಯಶಸ್ಸಿನ ನಂತರ ಎರಡನೆ ಕಂತಿನ ಬಗ್ಗೆ ಸಿನಿಮಾ ಬಳಗ ರಿಲ್ಯಾಕ್ಸ್ ಆಗಿದೆ. ಆದರೂ ಭಯಕ್ಕಿಂತ ಭಾವೋದ್ವೇಗವೇ ಹೆಚ್ಚಾಗಿದೆ ಎಂದು ‘ರೂಪರಾಶಿ’ ತಮನ್ನಾ ಹೇಳಿದ್ದಾಳೆ.

Comments are closed.