ಕರ್ನಾಟಕ

ರೈಲಿನ ಬರ್ತ್ ಪ್ರಯಾಣಿಕರಿಗೆ ಹೊದಿಕೆ ದಿಂಬು ನೀಡಿಕೆ

Pinterest LinkedIn Tumblr

trainಬೆಂಗಳೂರು, ಆ. ೨೨ – ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬರ್ತ್‌ನಲ್ಲಿ ರಾತ್ರಿ ವೇಳೆ ನಿದ್ರಿಸಲು ಹೊದಿಕೆ ಹಾಗೂ ದಿಂಬುಗಳನ್ನು ನೀಡದಿರಲು ನಿರ್ಧರಿಸಿರುವ ರೈಲ್ವೆ ಇಲಾಖೆಯು ಪ್ರಯಾಣಿಕರಿಂದ ಹಣ ಪಡೆದು ಇವುಗಳನ್ನು ವಿತರಿಸಲು ಉದ್ದೇಶಿಸಿದೆ.
ನಗರದ ರೈಲ್ವೆ ನಿಲ್ದಾಣದಲ್ಲಿ ಇ – ಬೆಡ್ ರೋಡ್ ಸೌಲಭ್ಯಕ್ಕೆ ದಕ್ಷಿಣ ವಲಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಸಂಜೀವ್ ಅಗರವಾಲ್ ಅವರು ಚಾಲನೆ ನೀಡಿದ್ದಾರೆ.
ಈ ಯೋಜನೆಯ ಪ್ರಕಾರ ಪ್ರಯಾಣಿಕರು ರಾತ್ರಿ ವೇಳೆ ನಿದ್ರಿಸಲು ಅಗತ್ಯವಾಗಿ ಬೇಕಾದ ಎರಡು ಹತ್ತಿ ಹೊದಿಕೆ ಹಾಗೂ ಒಂದು ದಿಂಬನ್ನು 140 ರೂ.ನ್ನು ಪಾವತಿ ಮಾಡಿ ಪಡೆಯಬೇಕಾಗುತ್ತದೆ.
ಅದೇ ರೀತಿ 110 ರೂ. ಮೌಲ್ಯದ ಬ್ಲಾಂಕೇಟ್‌ನ್ನು ಪಡೆಯಬಹುದು. ಅಲ್ಲದೇ, ಮೊದಲೇ ಆನ್‌ಲೈನ್ ಮೂಲಕ ಬುಕ್ ಮಾಡುವ ಅವಕಾಶವನ್ನು ಕಲ್ಪಿಸಿದೆ. ಈ ಹೊದಿಕೆಗಳನ್ನು ಬಳಸಿದ ಬಳಿಕ ಎಸೆಯುವ ಅಥವಾ ಮನೆಗೆ ಕೊಂಡೊಯ್ಯಬಹುದಾಗಿದೆ. ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಗರಿಗೆ ಈ ವ್ಯವಸ್ಥೆ ಹೆಚ್ಚು ಅನುಕೂಲಕರವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇದೇ ವೇಳೆ ರೈಲ್ವೆ ಇಲಾಖೆಯು ಆರ್.ಓ. ತಂತ್ರಜ್ಞಾನವಿರುವ 66ಡಬ್ಲ್ಯೂಯುವಿ ವ್ಯವಸ್ಥೆಯ ಕುಡಿಯುವ ನೀರಿನ ಯಂತ್ರಗಳನ್ನು ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದೆ.

Comments are closed.