ಮುಂಬರುವ ಚಿತ್ರದಲ್ಲಿ ಅನುಷ್ಕಾ ಶರ್ಮಾ ಹಾಗೂ ಕಂಗನಾ ರಣಾವತ್ ಗುಜುರಾತಿ ಹುಡುಗಿಯರಾಗಿ ನಿಮ್ಮ ಮುಂದೆ ಬರಲಿದ್ದಾರೆ. ಮುಂಬರುವ ಚಿತ್ರದಲ್ಲಿ ಇಬ್ಬರು ಗುಜುರಾತಿ ಹುಡುಗಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
‘ಸಿಮ್ರಾನ್’ ಚಿತ್ರದಲ್ಲಿ ಕಂಗನಾ ರಣಾವತ್ ರಾಜಕುಮಾರ್ ರಾವ್ ಜತೆಗೆ ರೋಮ್ಯಾನ್ಸ್ ಮಾಡಲು ರೆಡಿಯಾಗಿದ್ರೆ, ಇತ್ತ ನಟಿ ಅನುಷ್ಕಾ ಕೂಡ ಗುಜುರಾತಿ ಕ್ಯಾರೆಕ್ಟರ್‌ನಲ್ಲಿ ಮಿಂಚಲಿದ್ದಾರೆ.
ಹನ್ಸಾಲ್ ಮೆಹ್ತಾ ನಿರ್ದೇಶನದ ಸಿಮ್ರಾನ್ ಚಿತ್ರದ ಮೊದಲನೇಯ ಲುಕ್‌ನ್ನು ವಿಶ್ಲೇಷಕ ತರುಣ್ ಆದರ್ಶ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
ಸಿಮ್ರಾನ್ ಚಿತ್ರವು ಅಮೆರಿಕಾದ 4 ಬ್ಯಾಂಕುಗಳಲ್ಲಿ ದರೋಡೆ ಮಾಡಿರುವ ಭಾರತೀಯ ಮೂಲದ ಸಂದೀಪ್ ಕೌರ್ ಎಂಬ ನರ್ಸ್‌ನ ಜೀವನಾಕಥೆಯಿಂದ ಸ್ಪೂರ್ಥಿ ಪಡೆದ ಚಿತ್ರ ಇದಾಗಿದೆ. ಈ ಮಹಿಳಾ ಪ್ರಧಾನ ಚಿತ್ರವನ್ನು ಖ್ಯಾತ ನಿರ್ದೇಶಕ ಹನ್ಸಾಲ್ ಮೆಹ್ತಾ ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ ಕಂಗನಾ ಈ ಚಿತ್ರದಲ್ಲಿ ಪಂಜಾಬಿ ಎನ್‌ಆರ್‌ಐ ನರ್ಸ್ ಪಾತ್ರದಲ್ಲಿ ಮಿಂಚಿದ್ದಾರೆ.
ಇಮ್ತಿಯಾಜ್ ಅಲಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಅನುಷ್ಕಾ ಶರ್ಮಾ ಗುಜುರಾತಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅನುಷ್ಕಾ ಶಾರೂಖ್ ಖಾನ್ ಜತೆಗೆ ರೋಮ್ಯಾನ್ಸ್ ಮಾಡಲಿದ್ದಾರೆ.
Comments are closed.