ಮನೋರಂಜನೆ

ರಜನಿಕಾಂತ್ ಸ್ಟೈಲ್‌‌ನ್ನು ಅನುಕರಣೆ ಮಾಡಿದ್ರಾ ಕ್ರಿಕೆಟ್ ಆಟಗಾರ ಎಮ್.ಎಸ್ ಧೋನಿ

Pinterest LinkedIn Tumblr

doniದೆಹಲಿ: ನಟ ರಜನಿಕಾಂತ್ ಅಭಿಮಾನಿಗಳು ಅವರ ಸ್ಟೈಲ್‌ನ್ನು, ಮಾತನ್ನು ಅನುಕರಣೆ ಮಾಡುತ್ತಾರೆ, ಆದ್ರೆ ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ಎಮ್.ಎಸ್ ದೋನಿ ಅವರೇ ಸ್ಟೈಲ್‌ನ್ನು ಕಾಪಿ ಮಾಡಿದ್ರೆ ಹೇಗಿರುತ್ತದೆ. ಅರೇ.. ಇದೆಲ್ಲಾ ಹೇಗೆ ಅಂತೀರಾ ಇಲ್ಲಿದೆ ಸ್ಟೋರಿ.

ಭಾರತದ ಖ್ಯಾತ ಕ್ರಿಕೆಟ್ ಆಟಗಾರ ಎಮ್.ಎಸ್ ಧೋನಿ ರಜನಿಕಾಂತ್ ಅವರ ಸ್ಟೈಲ್‌ನ್ನು ಅನುಕರಣೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಖ್ಯಾತ ಕ್ರಿಕೆಟ್ ನಾಮರೊಬ್ಬ ತಲೈವಾ ರಜನಿಕಾಂತ್ ಅವರ ಸ್ಟೈಲ್‌ ಬಗ್ಗೆ ಕ್ರೇಜ್ ಆಗಿರುವುದು ಆಶ್ಚರ್ಯಕ್ಕೆ ಎಡೆ ಮಾಡಿಕೊಟ್ಟಿದೆ.

ಯೆಸ್, ರಜನಿಕಾಂತ್ ‘ಕಬಾಲಿ’ ಚಿತ್ರ ಕಳೆದ ದಿನಗಳಿಂದ ಸದ್ದು ಮಾಡಿತ್ತು. ಇನ್ನೂ ಚಿತ್ರದ ಬಗ್ಗೆ ಜನರ ಮನಸ್ಸಿನಿಂದ ಮಾಸಿಲ್ಲ. ಅಲ್ಲದೇ ಕಬಾಲಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಕಂಡಿತ್ತು. ಮುಂಬರುವ ಚಿತ್ರ 2.0 ದಲ್ಲಿ ರಜನಿಕಾಂತ್ ಬ್ಯೂಸಿ ಆಗಿದ್ದಾರೆ.

ಆದ್ರೆ ವಿಷಯ ಅದಲ್ಲ, ರಜನಿಕಾಂತ್ ಅವರ ‘ಕಬಾಲಿ’ ಚಿತ್ರದ ಸ್ಟೈಲನ್ನು ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡಿದ್ದಾರೆ. ನಿಮಗೆ ಆಶ್ಚರ್ಯ ಎನ್ನಿಸಬಹುದು..

ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಫೊಟೋ ಶೇರ್ ಮಾಡಿದ್ದಾರೆ. ತಲೈವಾ ರಜನಿಕಾಂತ್ ಅವರ ಸ್ಟೈಲ್ ಕಾಪಿ ಮಾಡಿರುವ ಧೋನಿ, ಅವರು ಕುಳಿತ ಭಂಗಿಯಲ್ಲಿ ತಾವು ಕೂಡ ಕುಳಿತುಕೊಂಡಿದ್ದಾರೆ.

ಈ ಫೊಟೋದಲ್ಲಿ ಎಮ್.ಎಸ್ ಧೋನಿ ರಜನಿಕಾಂತ ಅವರ ಕುಳಿತಿರುವ ಭಂಗಿಯಲ್ಲೇ ಧೋನಿ ಕೂಡ ಅದೇ ಸ್ಟೈಲ್‌ಲ್ಲಿ ಕುಳಿತಿದ್ದಾರೆ. ಇನ್ನೂ ಕುತೂಹಲಕಾರಿ ಎಂದರೆ ಎಮ್.ಎಸ್ ಧೋನಿ ಜೀವನಾಧಾರಿತ ಚಿತ್ರ ಸೆಪ್ಟೆಂಬರ್ 30ಕ್ಕೆ ತೆರೆ ಮೇಲೆ ಬರುತ್ತಲಿದೆ.

Comments are closed.