ಮನೋರಂಜನೆ

ನೀರು ಕೊಡದ ಗೋವಾನೇ ಬೇಕಿತ್ತಾ ಅಣ್ತಮ್ಮಾ

Pinterest LinkedIn Tumblr

yashhಯಶ್‌ ಮತ್ತು ರಾಧಿಕಾ ನಿಶ್ಚಿತಾರ್ಥವನ್ನು ಗೋವಾದಲ್ಲಿ ಆಯೋಜಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹದಾಯಿ ಜಲ ವಿವಾದ ಪ್ರಕರಣದಲ್ಲಿ ಕರ್ನಾಟಕ ಮತ್ತು ಗೋವಾದ ನಡುವೆ ವೈಮನಸ್ಯ ಉಂಟಾಗಿದೆ. ಇಡೀ ಚಿತ್ರರಂಗವೇ ಗೋವಾ ಸರ್ಕಾರದ ವಿರುದ್ಧ ಮಾತಾಡಿದೆ.

ಯಶ್‌ ಕೂಡ ಕರ್ನಾಟಕದ ರೈತರನ್ನು ಬೆಂಬಲಿಸಿ ಮಾತಾಡಿದ್ದಾರೆ ಹಾಗೂ ಗೋವಾ ಸರ್ಕಾರದ ನಿಲುವನ್ನು ಪ್ರತಿಭಟಿಸಿದ್ದಾರೆ. ಗೋವಾದ ಚಿತ್ರೋತ್ಸವಕ್ಕೆ ಹೋಗಬಾರದು ಎಂದು ಕರ್ನಾಟಕ ವಾಣಿಜ್ಯ ಮಂಡಳಿಯೇ ನಿರ್ಧಾರ ಕೈಗೊಂಡಿದೆ. ಇಂಥ ಹಿನ್ನೆಲೆಯಿರುವಾಗ ಯಶ್‌ ತಮ್ಮ ನಿಶ್ಚಿತಾರ್ಥವನ್ನು ಗೋವಾದಲ್ಲೇ ಯಾಕೆ ನಡೆಸಿದರು. ಆ ನಿಶ್ಚಿತಾರ್ಥ ಸಮಾರಂಭಕ್ಕೆ ಖರ್ಚಾಗಿರುವ ಕೋಟಿ ಕೋಟಿ ರೂಪಾಯಿ ಗೋವಾದ ಪಾಲಾಗಿದೆ. ಅದು ಕನ್ನಡ ಪ್ರೇಕ್ಷಕ ಕೊಟ್ಟ ಹಣವಲ್ಲವೇ? ಘೋಷಣೆ ಕೂಗುವಾಗ ಇದ್ದ ಅಭಿಮಾನ, ನಿಶ್ಚಿತಾರ್ಥ ಮಾಡಿಕೊಳ್ಳುವ ಹೊತ್ತಲ್ಲಿ ಯಾಕಿರಲಿಲ್ಲ ಎಂದು ಅನೇಕರು ಫೇಸ್‌ಬುಕ್‌ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಅದಕ್ಕೆ ಪ್ರತಿಯಾಗಿ, ರಾಧಿಕಾ ಅವರ ತವರೂರು ಗೋವಾ ಆಗಿರುವುದರಿಂದ ಅಲ್ಲಿ ನಿಶ್ಚಿತಾರ್ಥ ಇಟ್ಟುಕೊಳ್ಳಲಾಗಿದೆ. ಹೆಣ್ಣಿಗೆ ತನ್ನ ತವರೂರಲ್ಲಿ ನಿಶ್ಚಿತಾರ್ಥ ನಡೆಯಬೇಕೆಂಬ ಆಸೆಯಿರುತ್ತದೆ ಎಂಬ ಉತ್ತರಗಳೂ ವ್ಯಕ್ತವಾಗಿವೆ. ರಾಧಿಕಾ ಮತ್ತು ಅವರ ಕುಟುಂಬ ದಶಕಗಳಿಂದ ಕರ್ನಾಟಕದಲ್ಲೇ ನೆಲೆಸಿರುವುದರಿಂದ, ಕರ್ನಾಟಕವೇ ಅವರ ತವರು ಮನೆ. ಗೋವಾ ಅಲ್ಲ, ಹೀಗಾಗಿ ಕರ್ನಾಟಕದಲ್ಲೇ ನಿಶ್ಚಿತಾರ್ಥ ನಡೆಸಬೇಕಾಗಿತ್ತು ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ.

-ಉದಯವಾಣಿ

Comments are closed.