ಮನೋರಂಜನೆ

ಬರೋಬ್ಬರಿ 6 ಹಾಲಿವುಡ್ ಸಿನಿಮಾಗಳನ್ನು ನಿರಾಕರಿಸಿದ್ದಾರಂತೆ ಪ್ರಿಯಾಂಕ

Pinterest LinkedIn Tumblr

priyyಮುಂಬೈ: ಮೊನ್ನೆ ತಾನೇ ನಿರ್ದೇಶಕಿ ಕಮ್ ಕೊರಿಯಾಗ್ರಾಫರ್ ಫರ್ಹಾ ಖಾನ್ ಅವರು ತನ್ನ ಗೆಳೆಯ ಶಾರುಖ್ ಖಾನ್ ಅವರಿಗೆ ಹಾಲಿವುಡ್ ಅಭಿನಯಿಸೋದಕ್ಕೆ ಅನೇಕ ಆಫರ್ ಗಳು ಬಂದಿದ್ದವು.ಆದ್ರೆ ಅವರು ಅವುಗಳನ್ನೆ ಲ್ಲಾ ನಿರಾಕರಿಸುತ್ತಾ ಬಂದಿದ್ದಾರೆ ಅಂತಾ ಶಾರುಖ್ ಖಾನ್ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದರು. ಇದೀಗ ಪ್ರಿಯಾಂಕ ಕೂಡ ತನಗೆ ಹಾಲಿವುಡ್ ಸಿನಿಮಾಗಳಿಂದ ಬಂದಿರುವ ಆಫರ್ ಗಳ ಬಗ್ಗೆ ಮಾತನಾಡಿದ್ದಾರೆ.

ಸದ್ಯ ಬಾಲಿವುಡ್ ಗಿಂತ ಹೆಚ್ಚಾಗಿ ಪ್ರಿಯಾಂಕ ಛೋಪ್ರಾ ಅವರು ಗುರುತಿಸಿಕೊಳ್ಳುತ್ತಿರೋದು ಹಾಲಿವುಡ್ ನಲ್ಲಿ. ಕ್ವಾಂಟಿಕೋ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಪ್ರಿಯಾಂಕ ಅವರ ಇಮೇಜ್ ಬದಲಾಗಿ ಹೋಗಿದೆ.

ಹೀಗಿರುವಗಾಲೇ ಪಿಗ್ಗಿ ಹಾಲಿವುಡ್ ನಿಂದ ತನಗೆ ಬರುತ್ತಿರುವ ಆಫರ್ ಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ. ಅಂದ್ಹಾಗೆ ಸದ್ಯ ಕ್ವಾಂಟಿಕೋ ಸೀಸನ್ -2 ನಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕ ಛೋಪ್ರಾ ಅವರಿಗೆ ಬಾಲಿವುಡ್ ಸಿನಿಮಾಗಳಿಂದ ಅನೇಕ ಆಫರ್ ಗಳು ಬಂದಿದ್ದವಂತೆ.ಆದ್ರೆ ಪಿಗ್ಗಿ ಇದನ್ನೆಲ್ಲಾ ನಿರಾಕರಿಸಿದ್ದರಂತೆ.

ಅಷ್ಟೇ ಅಲ್ಲ ಹಾಲಿವುಡ್ ನಲ್ಲೂ ಬರೋಬ್ಬರಿ ಆರು ಸಿನಿಮಾಗಳಿಂದ ಪ್ರಿಯಾಂಕ ಅವರಿಗೆ ಅಭಿನಯಿಸೋದಕ್ಕೆ ಅವಕಾಶಗಳು ಬಂದಿದ್ದವಂತೆ ಆದ್ರೆ ಪ್ರಿಯಾಂಕ ಇವುಗಳನ್ನು ರಿಜೆಕ್ಟ್ ಮಾಡಿದ್ದಾರತೆ.

ಯಾಕಂದ್ರೆ ಪ್ರಿಯಾಕ ಅವರು ಮುಂದಿನ ವರ್ಷ ಅಂದ್ರೆ 2017 ಮಾರ್ಚ್ ತಿಂಗಳವರೆಗ ತುಂಬಾನೇ ಬ್ಯುಸಿಯಾಗಿದ್ದಾರಂತೆ. ಹಾಗಾಗಿ ಸಿನಾಮವನ್ನು ಒಪ್ಪಿಕೊಂಡ್ರೆ ಅಭಿನಯಿಸೋದು ಕಷ್ಟವಾಗುತ್ತೆ ಅಂತಾ ಅವರು ಎಲ್ಲಾ ಸಿನಿಮಾಗಳಿಗೂ ಬೈ ಹೇಳಿದ್ದಾರಂತೆ.ಕ್ವಾಂಟಿಕೋ ಕಾರ್ಯಕ್ರಮವೇ ನನಗೆ ತುಂಬಾನೇ ಕಷ್ಟ ಅನ್ನಿಸುತ್ತಿದೆ. ಇದರ ನಡುವೆ ಹಾಲಿವುಡ್ ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಂಡ್ರೆ ಅದಕ್ಕೆ ಸರಿಯಾಗಿ ನ್ಯಾಯ ಕೊಡಿಸಲು ಸಾಧ್ಯವಾಗೋದಿಲ್ಲ ಅಂತಾ ಅವರು ಹೇಳಿದ್ದಾರೆ.

Comments are closed.