ಮುಂಬೈ: ಬಾಲಿವುಡ್ ನಟಿ ಪ್ರಾಂಚಿ ದೇಸಾಯಿ ಮುಂಬರುವ ಚಿತ್ರ ರಾಕ್ ಆನ್ 2 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟಿ ಪ್ರಾಂಚಿ ದೇಸಾಯಿ ಚಿತ್ರರಂಗದಲ್ಲಿ ಸೌಂದರ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇಂಡಸ್ಟ್ರಿಯಲ್ಲಿ ಜನರು ಪ್ರತಿಭೆಗಿಂತಲೂ, ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ರರಂಗದಲ್ಲಿ ಬಹಳಷ್ಟು ಚಾಣಾಕ್ಷ ನಟರಿದ್ದಾರೆ. ಎಲ್ಲರಿಗೂ ಒಂದೇ ಸ್ಥಾನ ಪಡೆದುಕೊಳ್ಳೇಕೆ ಆಗಿಲ್ಲ. ಇದಕ್ಕೆ ಹಲವು ಕಾರಣಗಳಿರಬಹುದು. ಆದ್ರೆ ಬಿಟೌನ್‌ನಲ್ಲಿ ಸೌಂದರ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತದೆ ಎಂದು ಪ್ರಾಂಚಿ ತಿಳಿಸಿದ್ದಾರೆ.
27 ವರ್ಷದ ಪ್ರಾಂಚಿ ದೇಸಾಯಿ ಅಜರ್ ಚಿತ್ರದಲ್ಲಿ ನಟಿಸುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದರು.. ಅದಾದ ಮೇಲೆ ಕೆಲ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.
ಅಮಾಯಕ ಪಾತ್ರಗಳಲ್ಲಿ ನಟಿಸುವುದು ಬೇಸರ ತಂದಿದೆ ಎಂದು ಈ ಹಿಂದೆ ಪ್ರಾಂಚಿ ದೇಸಾಯಿ ತಿಳಿಸಿದ್ದರು. ನಾನು ವಿಭಿನ್ನ ಪಾತ್ರಗಳಲ್ಲಿ ನಟಿಸಲು ಬಯಸುತ್ತಿದ್ದೇನೆ. ನಾನು ಪದೇ ಪದೇ ಅಮಾಯಕ ಪಾತ್ರಗಳಲ್ಲಿ ನಟಿಸುವುದು ಕೂಡ ನನ್ನ ಅಭಿಮಾನಿಗಳಿಗೂ ಬೇಸರ ತಂದಿದೆ ಎಂದು ಪ್ರಾಂಚಿ ತಿಳಿಸಿದ್ದರು.
Comments are closed.